ಯಲ್ಲಾಪುರ: ನಗರದ ಮಲ್ಲಿಕಾ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರವಿವಾರ ಸಂಜೆ ಗ್ಯಾಸ್ ಟ್ಯಾಂಕರ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ.
ಈ ಅಪಘಾತದಲ್ಲಿ ಬೈಕ್ ಸವಾರ ಬಾಳಾ ವಿಠೋಬಾ ಗಾವಡೆ (45), ಜಮಗುಳಿ,ಕಣ್ಣಿಗೇರಿ ಈತ ಮೃತ ಪಟ್ಟಿದ್ದಾನೆ. ಈತನು ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದನು. ಲಾರಿ ಚಾಲಕನ ನಿರ್ಲಕ್ಷಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಈ ದುರ್ಘಟನೆಯಲ್ಲಿ ಬೈಕಿನ ಹಿಂಬದಿ ಸವಾರ ಕೃಷ್ಣಾ ಪರಶ್ಯಾ ಮರಾಠಿ ಗಂಭೀರ ಗಾಯಗೊಂಡಿದ್ದಾನೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.