ಸಿದ್ದಾಪುರ: ತಾಲೂಕಿನಲ್ಲಿ ಆ.23 ಸೋಮವಾರ 2100 ಡೋಸ್ ಕೋವಿಡ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಲಸಿರ್ಸಿಯಲ್ಲಿ 200 ಡೋಸ್, ಹಿರಿಯ ಪ್ರಾಥಮಿಕ ಶಾಲೆ ಕಾನಗೋಡಿನಲ್ಲಿ 300, ಸಿದ್ದಾಪುರ ನಗರದ ಅಂಬೇಡ್ಕರ್ ಭವನದಲ್ಲಿ 1, 2, 3 ನೇ ವಾರ್ಡ್‍ನವರಿಗೆ ಅಂಬೇಡ್ಕರ್ ಭವನದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊರ್ಲಕೈ ವ್ಯಾಪ್ತಿಯ ಮನ್ಮನೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ 200, ಹೊಸಳ್ಳಿ ಶಾಲೆಯಲ್ಲಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಹೇರೂರು ವ್ಯಾಪ್ತಿಯ ಗ್ರಾ.ಪಂ ಸಭಾಭವನದಲ್ಲಿ 150 ಡೋಸ್ ಲಸಿಕೆ, ತಂಡಗುಂಡಿ ಗ್ರಾ.ಪಂ ಸಭಾಭವನದಲ್ಲಿ 150 ಡೋಸ್ ಲಸಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಾನಸೂರು ವ್ಯಾಪ್ತಿಯ ಉಪಕೇಂದ್ರ ತ್ಯಾಗಲಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 300 ಡೋಸ್, ಕ್ಯಾದಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200, ಗುಂಜಗೋಡು ಪ್ರಾಥಮಿಕ ಶಾಲೆಯಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ.