ಬೆಂಗಳೂರು: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಕೊಂಚ ಪ್ರಮಾಣದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ನೈರುತ್ಯ ಮಾನ್ಸೂನ್ ಜೊತೆಗೆ ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವನ್ನು ಮೇ.16 ರ ಸುಮಾರಿಗೆ ಆಗಮಿಸುತ್ತದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ 16, ರ ಸುಮಾರಿಗೆ ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೈರುತ್ಯ ಮಾನ್ಸೂನ್ ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ ಎಂದು ಇಲಾಖೆಯ ಮುನ್ಸೂಚನೆಯಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಮೇ.22 ರ ವೇಳೆಗೆ ಮುಂಗಾರು ಅಂಡಮಾನ್ ಪ್ರವೇಶಿಸುತ್ತದೆ. ಬದಲಾದ ಹವಾಮಾನದಿಂದಾಗಿ ಬೇಗನೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.