ಯಲ್ಲಾಪುರ: ತಾಲೂಕಿನ ಇಡಗುಂದಿ ಪಂಚಾಯತದ ತಾಳಿಕುಂಬ್ರಿ ಗ್ರಾಮಕ್ಕೆ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ಬಗ್ಗೆ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ರಸ್ತೆಯ ಅಭಿವೃದ್ದಿಗಾಗಿ ₹ 4 ಲಕ್ಷ ಅನುದಾನವನ್ನು ಒದಗಿಸಿದ್ದು, ಹಳ್ಳದ ಇನ್ನೊಂದು ಕಡೆ ವಾಸಿಸುವ 3 ಕುಟುಂಬಗಳಿಗೆ ಸೇತುವೆಯ ಅತೀ ಅವಶ್ಯಕತೆ ಇದ್ದು ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು. ಜೊತೆಗೆ ಸಹ್ಯಾದ್ರಿ ಸಂಚಯ ಸಂಸ್ಥೆಯ ಮುಖಾಂತರ ಹಳ್ಳ ದಾಟಲು ಇರುವ ಕಟ್ಟಿಗೆ ಸಂಕಕ್ಕೆ ಸಹಾಯವಾಗುವಂತಹ ಹಗ್ಗವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಭಾಜಪ ಯಲ್ಲಾಪುರ ಎಸ್.ಟಿ.ಮೊರ್ಚ ಅಧ್ಯಕ್ಷ ಹಾಗೂ ಲ್ಯಾಂಪ್ಸ್ ಅಧ್ಯಕ್ಷ ರಾಮನಾಥ ಸಿದ್ದಿ, ಪ್ರಧಾನ ಕಾರ್ಯದರ್ಶಿ ಅನಂತ ಸಿದ್ದಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಮಹಿಳಾ ಮೋರ್ಚಾ ಸದಸ್ಯೆ ರಾಜೇಶ್ವರಿ ಸಿದ್ದಿ, ಸಹ್ಯಾದ್ರಿ ಸಂಚಯದ ಕಾರ್ಯಕರ್ತರು, ಪ್ರಮುಖರಾದ ಸುಬ್ಬಾ ಸಿದ್ದಿ , ಗಣಪತಿ ಸಿದ್ದಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.