ಶಿರಸಿ: ಅಡಿಕೆ ಮತ್ತು ಸಂಬಾರು ಪದಾರ್ಥಗಳ ಬೆಳೆಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರದ ಸ್ವಾಮ್ಯ ಸಂಸ್ಥೆಯಾದ ಅಡಿಕೆ ಮತ್ತು ಸಂಬಾರು ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯದಿಂದ ಅಡಿಕೆ ಬೆಳೆಯನ್ನು ಕೈಬಿಟ್ಟು, ಗೇರು ಬೀಜ & ಕೋಕೋ ಅಭಿವೃದ್ಧಿ ನಿರ್ದೇಶನಾಲಯದೊಂದಿಗೆ ಸಂಬಾರು ಪದಾರ್ಥ ಬೆಳೆಯನ್ನು ಮಾತ್ರ ವಿಲೀನಗೊಳಿಸುವ ಪ್ರಸ್ಥಾವನೆ ಕೇಂದ್ರ ಸರ್ಕಾರದ ಮುಂದೆ ಇದ್ದು, ಈ ಪ್ರಸ್ಥಾವನೆಯನ್ನು ಕೈಬಿಡುವಂತೆ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ನಿ., ಶಿವಮೊಗ್ಗ ಇದರ ವತಿಯಿಂದ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಆ.18 ರಂದು ಬಾಳೆಹೊನ್ನೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮ್ಯಾಮ್ಕೋಸ್‍ನ ಉಪಾಧ್ಯಕ್ಷರು ಹಾಗೂ ಕ.ರಾ.ಅ.ಸ.ಸಂ.ಸ.ಮಹಾಮಂಡಳ ಶಿವಮೊಗ್ಗ ಇದರ ಅಧ್ಯಕ್ಷ ಸುಬ್ರಹ್ಮಣ್ಯ ವೈ.ಎಸ್., ಟಿ.ಎಸ್.ಎಸ್. ಲಿ.,ಶಿರಸಿಯ ನಿರ್ದೇಶಕರು ಹಾಗೂ ಕ.ರಾ.ಅ.ಸ.ಸಂ.ಸ. ಮಹಾಮಂಡಳ ಶಿವಮೊಗ್ಗದ ಉಪಾಧ್ಯಕ್ಷ ಶಶಾಂಕ್ ಎಸ್. ಹೆಗಡೆ ಶೀಗೇಹಳ್ಳಿ, ತುಮ್ಕೋಸ್ ಚನ್ನಗಿರಿ ಹಾಗೂ ಕ.ರಾ.ಅ.ಸ.ಸಂ.ಸ.ಮಹಾಮಂಡಳ ಶಿವಮೊಗ್ಗದ ನಿರ್ದೇಶಕರಾದ ಹೆಚ್. ಎಸ್. ಶಿವಕುಮಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು ಎಂದು ಟಿ.ಎಸ್.ಎಸ್.ನ ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.