• first
  second
  third
  previous arrow
  next arrow
 • ಆ.22 ಕ್ಕೆ ‘ಸಂಜಯ ರಾಯಭಾರ’ ತಾಳಮದ್ದಲೆ ಪ್ರದರ್ಶನ

  300x250 AD

  ಶಿರಸಿ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ‘ಸೃಷ್ಟಿ ಕಲಾಪ’ ಸಂಘಟನೆಯ ಮಹಿಳೆಯರು ಮೊದಲ ಬಾರಿಗೆ ತಾಳಮದ್ದಳೆ ಪ್ರಸಂಗವನ್ನು ಪ್ರದರ್ಶಿಸಲಿದ್ದು, ಸೃಷ್ಟಿ ಕಲಾಪದಿಂದ ಆ.22 ಭಾನುವಾರ 3 ಗಂಟೆಗೆ ‘ಸಂಜಯ ರಾಯಭಾರ’ ಎನ್ನುವ ತಾಳಮದ್ದಳೆ ಪ್ರಸಂಗವನ್ನು ನಗರದ ಪ್ರಗತಿ ನಗರದ ಮೊದಲನೇ ಅಡ್ಡ ರಸ್ತೆ ಶ್ರೀರಾಮ ನಿಲಯದಲ್ಲಿ ಏರ್ಪಡಿಸಲಾಗಿದೆ.

  300x250 AD

  ಹಿಮ್ಮೇಳದಲ್ಲಿ ಶ್ರೀಪಾದ ಭಾಗವತರು ಹಾಗೂ ತಂಡದವರು ಭಾಗಿಯಾಗಲಿದ್ದಾರೆ. ಸುಬ್ರಾಯ ಹೆಗಡೆ ಕೆರೆಕೊಪ್ಪ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅರ್ಥದಾರಿಗಳಾಗಿ ಶ್ರೀಕೃಷ್ಣ ಪಾತ್ರದಲ್ಲಿ ನಿರ್ಮಲಾ ಭೈರುಂಬೆ, ದೃತರಾಷ್ಟ್ರನಾಗಿ ಸುಮಾ ಗಡಿಗೆ ಹೊಳೆ, ಕೌರವನ ಪಾತ್ರದಲ್ಲಿ ಡಾ.ವಿಜಯನಳಿನಿ ಮತ್ತಿಹಳ್ಳಿ, ಸಂಜಯನಾಗಿ ಸಾವಿತ್ರಿ ಶಾಸ್ತ್ರಿ, ಧರ್ಮರಾಜನಾಗಿ ಭವಾನಿ ಎಂ ಹೆಗಡೆ, ಭೀಮನಾಗಿ ಗಾಯತ್ರಿ ಹೆಗಡೆ, ಅರ್ಜುನನಾಗಿ ನಯನಾ ಹೆಗಡೆ ಉಮ್ಮಚ್ಗಿ, ಭೀಷ್ಮನಾಗಿ ದಾಕ್ಷಾಯಣಿ ಹೆಗಡೆ, ದ್ರೌಪದಿ ಪಾತ್ರದಲ್ಲಿ ರೋಹಿಣಿ ಹೆಗಡೆ ಮತ್ತು ಶೈಲಜಾ ಗೊರನ್ಮನೆ ಭಾಗಿಯಾಗಲಿದ್ದಾರೆ.

  Share This
  300x250 AD
  300x250 AD
  300x250 AD
  Back to top