• Slide
  Slide
  Slide
  previous arrow
  next arrow
 • ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿದ ಗ್ರಾ.ಪಂ ಅಧ್ಯಕ್ಷೆ ಭಾರತಿ ಗೌಡ

  300x250 AD

  ಕುಮಟಾ: ಜಿಲ್ಲಾ ಪಂಚಾಯತಿ ಉತ್ತರಕನ್ನಡ, ತಾಲೂಕು ಪಂಚಾಯತಿ ಕುಮಟಾ ಹಾಗೂ ಗ್ರಾಮ ಪಂಚಾಯತಿ ಹನೇಹಳ್ಳಿ ಇವರ ಆಶ್ರಯದಲ್ಲಿ ನಿರ್ಮಾಣಗೊಂಡ ಸ್ವಚ್ಛ ಸಂಕಿರ್ಣ ಘಟಕವನ್ನು ಹನೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ಭಾರತಿ ಗೌಡ ಉದ್ಘಾಟಿಸಿದರು.

  ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ ನಾಯ್ಕ ಮಾತನಾಡಿ ಹಲವೆಡೆಗಳಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಕಸಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಇದರಿಂದ ಪರಿಸರ ಹಾನಿಯ ಜೊತೆಗೆ ಇವುಗಳಲ್ಲಿರುವ ಪ್ಲಾಸ್ಟಿಕ್ ನ್ನು ಹಸುಗಳು ತಿನ್ನುವುದರಿಂದ ಅವುಗಳಿಗೆ ತೊಂದರೆಯಸಗಲಿದೆ. ಹೀಗಾಗಿ ಪ್ರತಿ ಗ್ರಾ.ಪಂ ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸುವ ಯೋಜನೆ ಇದಾಗಿದೆ ಎಂದರು. ಇದೇ ವೇಳೆ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಚಾಲನೆ ನೀಡಲಾಯಿತು.

  300x250 AD

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭರತ್ ಗಾಂವ್ಕರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ, ಪಂಚಾಯತರಾಜ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಜಿ.ಗುನಗಿ, ಪ್ರಮುಖರಾದ ಮಹೇಶ್ ಶೆಟ್ಟಿ, ಚಂದ್ರಕಾಂತ ಶೆಟ್ಟಿ, ರಾಜೇಶ್ ನಾಯಕ,ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top