ಕುಮಟಾ: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಕುಮಟಾ ತಾಲೂಕಾ ಛಾಯಾಗ್ರಾಹಕರ ಸಂಘದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ದಿಮೆದಾರರಾದ ಜಯರಾಜ್ ಚಿಕ್ಕನಗೌಡರ ಉದ್ಘಾಟಿಸಿದರು.
ಈ ವೇಳೆ ಮೈಸೂರಿನ ಜಿ ಎಸ್ ಬಾಬು ಅವರಿಂದ ಆಧುನಿಕ ಪೆÇೀಟೊಗ್ರಾಪಿ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಮಟಾ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಗಣೇಶ ಟಿ ಎಚ್ ಮಾತನಾಡಿ ಲೂಯಿಸ್ ಡೆಗುರೇ ಮೊದಲು ಡೆಗೊರಿಯೊ ಮಾದರಿಯ ಕ್ಯಾಮರಾವನ್ನು ಆವಿಷ್ಕಾರ ಮಾಡಿದರು.ಅದರ ನೆನಪಿಗಾಗಿ 1839 ಅಗಸ್ಟ್ 19 ರಂದು ಪ್ರೆಂಚ್ ಸರ್ಕಾರವು ಡೆಗೋರಿಯೊ ಟೈಪ್ ಪೆÇಟೋಗ್ರಾಪಿಯನ್ನು ಆವಿಷ್ಕಾರವಾಗಿ ಕೊಡುಗೆ ನೀಡಿತು.ಈ ದಿನವನ್ನು ವಿಶ್ವಛಾಯಾಗ್ರಹಣ ದಿನವನ್ನಾಗಿ ಆಚರಿಸಲಾಗುತ್ತದೆ.ಇಂದು ತಂತ್ರಜ್ಞಾನದ ಬೆಳವಣಿಗೆಯಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಪ್ರತಿಯೊಬ್ಬ ಛಾಯಾಗ್ರಾಹಕನೂ ಕೂಡ ನೂತನ ತಂತ್ರಜ್ಞಾನವನ್ನು ಕಲಿತುಕೊಳ್ಳಬೇಕಾಗಿದೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಕುಮಟಾ ಅಧ್ಯಕ್ಷರಾದ ಅನ್ಸಾರ್ ಶೇಖ್ ಮಾತನಾಡಿ ಕತ್ತಲು ಮತ್ತು ಬೆಳಕಿನ ಸಂಯೋಜನೆಯ ಮೂಲಕ ಅದ್ಭುತವಾದ ಜಗತ್ತನ್ನು ಛಾಯಾಗ್ರಹಣದ ಮೂಲಕ ಸೃಷ್ಠಿಸಬಹುದಾಗಿದೆ.ಇಂದು ಛಾಯಾಗ್ರಹಣ ಎಂಬುದು ಪತ್ರಿಕೋದ್ಯಮದ ಒಂದು ಅವಿಭಾಜ್ಯ ಅಂಗವಾಗಿದ್ದು, ಒಂದು ಸುದ್ದಿ ಮತ್ತು ವರದಿಯನ್ನು ತಯಾರಿಸಬೇಕಾದರೆ ಅಲ್ಲಿ ಪೂರಕವಾದ ಛಾಯಾಚಿತ್ರದ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಜಿ ಎಸ್ ಬಾಬುರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗಜಾನನ ನಾಯ್ಕ, ಉಪಾಧ್ಯಕ್ಷರಾದ ರವಿ ಗಾವಡಿ,ಸದಸ್ಯರಾದ ಸುರೇಶ ಹರಿಕಂತ್ರ,ಗಜಾನನ ಪಟಗಾರ,ಪ್ರಶಾಂತ ನಾಯ್ಕ ಸೇರಿದಂತೆ ಅನೇಕರು ಇದ್ದರು.