ಯಲ್ಲಾಪುರ: ಚಂದ್ಗುಳಿ ಗ್ರಾಮ ಪಂಚಾಯತದ 2020-21 ನೇ ಸಾಲಿನ ಜಮಾಬಂದಿ ಸಭೆ ನೋಡೆಲ್ ಅಧಿಕಾರಿ ಬಿಇಓ ಎನ್.ಆರ್.ಹೆಗಡೆ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಯಾವುದೇ ವಿಶೇಷ ಚರ್ಚೆ ಗಳಿಲ್ಲದೇ ನಡೆದ ಈ ಸಭೆಯಲ್ಲಿ 2020-21 ನೇ ಸಾಲಿನ ಜಮಾ ಖರ್ಚುಗಳನ್ನು ಸಾದರಪಡಿಸಲಾಯಿತು. ಒಟ್ಟು ಬಿಡುಗಡೆಯಾದ ಅನುದಾನ 1,38,46,474 ರೂಗಳಗಿದ್ದು 1,00,23,539 ಖರ್ಚು ಮಾಡಲಾಗಿದೆ. 3,82,5932 ರೂ ಉಳಿತಾಯವಾಗಿರುವ ಬಗ್ಗೆ ಪಿಡಿಓ ರಾಜೇಶ ಶೇಟ್ ಸಭೆಗೆ ಮಹಿತಿ ನೀಡಿದರು. ಸಭೆಯಲಿ ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಸದಸ್ಯ ಆರ್.ಎಸ್.ಭಟ್ಟ ಸುಬ್ಬಣ್ಣ ಉದ್ದಾಬೈಲ್, ಅಶೋಕ ಮರಾಠಿ, ರೇಣುಕಾ ಸಿದ್ದಿ ಇದ್ದರು.