ಮುಂಡಗೋಡ: ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮುಂದೆ ನಿಂತು ಪೌರ ಕಾರ್ಮಿಕರರಿಂದ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುವ ಹೊಂಡವನ್ನು ಸ್ವಚ್ಛಗೊಳಿಸಿದರು.
ಆ. 3ರಂದು ಬಿಜೆಪಿ ಯುವ ಮೋರ್ಚಾ ಅವರು ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಬಸವನ ಹೊಂಡದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಾಲ್ಕು ಜನ ಸಾವನ್ನಪ್ಪಿದ್ದಾg.É ಹಿಂದೂಗಳ ಆರಾಧ್ಯ ದೈವವಾದ ಗಣೇಶನನ್ನು ಇದೇ ಹೊಂಡದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಆದ ಕಾರಣ ಈ ಹೊಂಡವನ್ನು ಸ್ವಚ್ಛಗೊಳಿಸಿ ಆರಧ್ಯ ದೈವವಾದ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲು ಅನುವು ಮಾಡಿಕೊಡಬೇಕೆಂದು ಮನವಿ ನೀಡಿದ್ದರು.
ಮನವಿಗೆ ಸ್ಪಂದಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹಾವೇರಿ ಮತ್ತು ಉಪಾಧ್ಯಕ್ಷ ಮಂಜುನಾಥ ಹರಮಲಕರ ಅವರು ಸ್ಥಳದಲ್ಲಿಯೇ ಇದ್ದು ಹೊಂಡದ ಸುತ್ತ-ಮುತ್ತಲಿನ ಗಿಡ-ಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿದರು.