ಕುಮಟಾ: ಗೋಕರ್ಣದ ಓಂ ಬೀಚ್ ಬಳಿ ಸೆಲ್ಫಿ ಕ್ಲಿಕ್ಕಿಸುವ ಸಮಯದಲ್ಲಿ ಕಾಲು ಜಾರಿ ಬಿದ್ದ ಯುವಕ ಸಮುದ್ರ ಪಾಲಾದ ಘಟನೆ ಇಂದು ನಡೆದಿದೆ.
ಹಾನಗಲ್ ಮೂಲದ ಶೇಕಪ್ಪ ಕಮಾಟಿ (35) ಸಮುದ್ರಪಾಲಾದ ವ್ಯಕ್ತಿಯಾಗಿದ್ದು ಹಾನಗಲ್ ನಿಂದ ಗೋಕರ್ಣಕ್ಕೆ 12 ಜನರೊಂದಿಗೆ ಇಂದು ಮಧ್ಯಾಹ್ನ ಆಗಮಿಸಿದ್ದ ಈತ ಓಂ ಬೀಜ್ ನ ಬಲಭಾಗದಲ್ಲಿನ ಸಮುದ್ರ ತೀರದ ಕಲ್ಲುಬಂಡೆ ಬಳಿ ಸೆಲ್ಫಿ ತೆಗೆದುಕೊಳ್ಳುತಿದ್ದ. ಈ ಸಂದರ್ಭದಲ್ಲಿ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾನೆ.
ಲೈಫ್ ಗಾರ್ಡಗಳು ರಕ್ಷಿಸುವ ಪ್ರಯತ್ನ ಮಾಡಿದರಾದರೂ ರಕ್ಷಣೆ ಸಾಧ್ಯವಾಗಿಲ್ಲ. ಈತನ ಶವಕ್ಕಾಗಿ ಪೆÇಲೀಸರಿಂದ ಶೋಧ ಕಾರ್ಯ ನಡೆಯುತಿದ್ದು,ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.