ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ತೃಪ್ತಿ ವೈನ್ ಶಾಪ್‍ನಲ್ಲಿ ಗುರುವಾರ ಬೆಳಿಗ್ಗಿನ ಜಾವ ಯಾರೋ ಕಳ್ಳರು ಶಾಪ್’ನ ಮೇಲ್ಛಾವಾಣಿ ಕೊರೆದು ಒಳಗೆ ಪ್ರವೇಶಿಸಿ ಕ್ಯಾಶ ಬಾಕ್ಸ್‍ನಲ್ಲಿದ್ದ 1,93,500 ರೂ ನಗದನ್ನು ಕಳ್ಳತನ ಮಾಡಿಕೊಂಡು ಹೊದ ಘಟನೆ ಜರುಗಿದೆ.
ಶಾಪ್ ನ ಪಕ್ಕದ ಬಿಲ್ಡಿಂಗ್ ಮೂಲಕ ಬಂದ ಕಳ್ಳರು ಮೊದಲಿಗೆ ಶಾಪ್‍ನ ಮೇಲ್ಮಡಿಯ ತಗಡಿನ ಶೀಟ್ ತೆಗೆದಿದ್ದಾರೆ. ನಂತರ ರೂಮಿನ ಪಾಟಿಕಲ್ಲ ಒಡೆದು ಅದರ ಕೆಳಗೆ ಇದ್ದ ಕಟ್ಟಗಿಯ ಹಲಗಿಯನ್ನು ಕಳ್ಳರು ಮುರಿದು ಒಳಗೆ ಇಳದಿದ್ದಾರೆ. ಪ್ಲಾಸ್ಟಿಕ ಬಾಕ್ಸಿನಲ್ಲಿ ಬುಧವಾರ ವ್ಯಾಪಾರ ಮಾಡಿ ಇಟ್ಟಿದ್ದ 1,93,500 ರೂ ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಈರಜ್ಜ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪಿಎಸೈ ಎನ್.ಡಿ ಜಕ್ಕಣ್ಣವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳ್ಳರು ಪ್ಲಾಸ್ಟಿಕ್ ಬಾಕ್ಸಿನಲ್ಲಿದ್ದ ನಗದನ್ನು ಮಾತ್ರ ಕಳ್ಳತನ ಮಾಡಿದ್ದು ವೈನ್ ಶಾಪ್‍ನಲ್ಲಿರುವ ಯಾವೊಂದು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೊಗಿಲ್ಲ. ಆದರೆ ಶಾಪ್‍ನಲ್ಲಿದ್ದ ಸಿ.ಸಿಕ್ಯಾಮೆರಾದಲ್ಲಿ ಒಬ್ಬ ಕಳ್ಳ ಮಾತ್ರ ಮೇಲ್ಮಡಿಯಿಂದ ಇಳಿದು ಕಳ್ಳತನ ಮಾಡಿರುವುದು ಕಂಡುಬಂದಿದೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.