• Slide
    Slide
    Slide
    previous arrow
    next arrow
  • ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆದವಗೆ ₹ 25 ಸಾವಿರ ದಂಡ

    300x250 AD

    ಹೊನ್ನಾವರ: ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯುತ್ತಿದ್ದ ದುಷ್ಕರ್ಮಿಗಳಿಗೆ 25 ಸಾವಿರ ದಂಡವಿಧಿಸಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

    ತಾಲೂಕಿನ ಮಂಕಿ ಪ.ಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯಗಳನ್ನು ತಂದು ಸಾರ್ವಜನಿಕ ರಸ್ತೆ , ರಾಷ್ಟ್ರೀಯ ಹೆದ್ದಾರಿ ಪಕ್ಕ ಹಾಗೂ ಜನನಿಬಿಡ ಪ್ರದೇಶದಲ್ಲಿ ಕಸವನ್ನು ಎಲ್ಲಿಂದಲೋ ತಂದು ದುಷ್ಕರ್ಮಿಗಳು ರಾಜಾರೋಷವಾಗಿ ಎಸೆದು ಹೋಗುತ್ತಿದ್ದರು. ಈ ಕುರಿತು ಪ.ಪಂ.ಗೆ ಅನೇಕ ದೂರುಗಳು ಸಲ್ಲಿಕೆಯಾಗಿತ್ತು.

    ಆ.16 ರಂದು ದೂರು ಆಧರಿಸಿ ಮಂಕಿ ಪ‌.ಪಂ ಮುಖ್ಯಾಧಿಕಾರಿ ಅಜೇಯ ಭಂಡಾರಕರ್ ಸ್ಥಳೀಯ ಅರಣ್ಯಾಧಿಕಾರಿ ವರದರಂಗನಾಥ ಹಾಗೂ ಪೋಲೀಸ್ ಉಪನಿರೀಕ್ಷಕ ಅಶೋಕ ಮಾಳಭಗಿ ಅವರಿಗೆ ತೀವ್ರ ನಿಗಾ ಇರಿಸುವಂತೆ ತಿಳಿಸಿದ್ದರು.

    300x250 AD

    ಅಕ್ಕಪಕ್ಕದ ಸಿ ಸಿ ಕ್ಯಾಮರಾ ಗಳನ್ನು ಪರಿಶೀಲಿಸಿ ಅರಣ್ಯ ಇಲಾಖೆ ಹಾಗೂ ಮಂಕಿ ಪ.ಪಂ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ಕಸ ಎಸೆಯುತ್ತಿದ್ದ ವ್ಯಕ್ತಿಯನ್ನು ಕಂಡುಹಿಡಿಯಲಾಗಿದೆ. ಈ ಸಂಬಂಧದ ಅಬುಬಖರ್ ಅಬ್ಬಾಸ್ ಎಂಬ ವ್ಯಕ್ತಿಯ ವಾಹನ ವಶಪಡಿಸಿಕೊಂಡು 25 ಸಾವಿರ ದಂಡ ವಿಧಿಸಿ ಇದೇ ರೀತಿ ಮುಂದುವರೆದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top