ಸಿದ್ದಾಪುರ: ತಾಲೂಕಿನಲ್ಲಿ ಆ.21 ಶನಿವಾರದಂದು ವಿವಿಧೆಡೆ ಲಸಿಕಾ ಶಿಬಿರ ನಡೆಯಲಿದೆ.
ಕೋಲ್ ಸಿರ್ಸಿ ಆರೋಗ್ಯಕೇಂದ್ರದ ಬಿಕ್ಕಳಸಿ ಉಪಕೇಂದ್ರದ ವತಿಯಿಂದ ಕೊಂಡ್ಲಿ ಪ್ರಾಥಮಿಕ ಶಾಲೆಯಲ್ಲಿ ಲಸಿಕಾಶಿಬಿರ ನಡೆಯಲಿದ್ದು 200 ಡೋಸ್ ಲಸಿಕೆ ಲಭ್ಯವಿರುತ್ತದೆ.
ಕಾನಸೂರಿನ ಸಭಾಭವನದಲ್ಲಿ ಲಸಿಕಾ ಶಿಬಿರ ನಡೆಯಲಿದ್ದು 300 ಡೋಸ್ ಲಸಿಕೆ ಲಭ್ಯವಿದೆ. ಬಿಳಗಿ ಆರೋಗ್ಯ ಕೇಂದ್ರದ ವತಿಯಿಂದ ಹಲಗೇರಿಯ ಅಂಬೇಡ್ಕರ್ ಸಭಾಭವನದಲ್ಲಿ ಲಸಿಕಾ ಶಿಬಿರ ನಡೆಯಲಿದ್ದು 300 ಡೋಸ್ ಲಸಿಕೆ ಲಭ್ಯವಿದೆ.
ಕೋರ್ಲಕೈ ಆರೋಗ್ಯಕೇಂದ್ರದ ವತಿಯಿಂದ ಕೋರ್ಲಕೈ ಗ್ರಾ.ಪಂ.ನಲ್ಲಿ ಲಸಿಕಾಶಿಬಿರ ವಿದ್ದು 300 ಡೋಸ್ ಲಸಿಕೆ ಲಭ್ಯವಿದೆ. ಕ್ಯಾದಗಿ ಆರೋಗ್ಯ ಕೇಂದ್ರದಲ್ಲಿ ಲಸಿಕಾಶಿಬಿರ ನಡೆಯಲಿದ್ದು 300 ಡೋಸ್ ಲಸಿಕೆ ಲಭ್ಯವಿರುತ್ತದೆ.
ಹೇರೂರು ಆರೋಗ್ಯ ಕೇಂದ್ರದ ವತಿಯಿಂದ ಅಣಲೇಬೈಲ್ ಗ್ರಾ.ಪಂ.ಸಭಾಭವನದಲ್ಲಿ ಲಸಿಕಾ ಶಿಬಿರವಿದ್ದು 150 ಡೋಸ್ ಹಾಗೂ ಕಂಚಿಕೈ ಗ್ರಾ.ಪಂ.ಸಭಾಭವನದಲ್ಲಿ 150 ಡೋಸ್ ಲಸಿಕೆ ಲಭ್ಯವಿರುತ್ತದೆ.
ದೊಡ್ಮನೆ ಆರೋಗ್ಯ ಕೇಂದ್ರದಲ್ಲಿ ಲಸಿಕಾಶಿಬಿರ ನಡೆಯಲಿದ್ದು 200 ಡೋಸ್ ಲಸಿಕೆ ಲಭ್ಯವಿರುತ್ತದೆ.
ವಾರ್ಡ್ ಸಂಖ್ಯೆ 5 ರ ನಿವಾಸಿಗಳಿಗಾಗಿ ಟಿಎಂಎಸ್ ಯಾರ್ಡ್ ನಲ್ಲಿ ಲಸಿಕಾ ಶಿಬಿರ ಏರ್ಪಡಿಸಲಾಗಿದ್ದು 400 ಡೋಸ್ ಲಸಿಕೆ ಲಭ್ಯವಿರುತ್ತದೆ.
ಎರಡನೇ ಡೋಸ್ ಪಡೆಯುವ ಬಾಣಂತಿ ಹಾಗೂ ಗರ್ಭಿಣಿಯರಿಗೆ ಆದ್ಯತೆ ನೀಡಲಾಗುವುದು ಎಂದು ತಾಲೂಕ ಆರೋಗ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.