ಕುಮಟಾ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನೊಂದಿಗೆ ಜೀವ ವಿಮಗೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಂಡಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆನರಾ ಎಚ್‍ಎಸ್‍ಬಿಸಿ ಜೀವ ವಿಮಾ ಕಂಪೆನಿಯು, ಮಗುವಿನ ಉಜ್ವಲ ಭವಿಷ್ಯವನ್ನು ಖಾತರಿಪಡಿಸುವ ಸ್ಮಾರ್ಟ್ ಜ್ಯೂನಿಯರ್ ಹೆಸರಿನ ನೂತನ ವಿಮಾ ಯೋಜನೆಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಬಿಡುಗಡೆ ಮಾಡಿದ್ದು, ಇದನ್ನು ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಎ. ಪ್ರಕಾಶ ಗುರುವಾರ ಇಲ್ಲಿರುವ ಬ್ಯಾಂಕಿನ ಪ್ರಾದೇಶಿಕ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಬಳಕ ಅವರು ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿರುವುದರಿಂದ ಹಾಗೂ ಹೆಚ್ಚುತ್ತಿರುವ ವೆಚ್ಚವನ್ನು ಸರಿಹೊಂದಿಸಿಕೊಳ್ಳಬೇಕಾದ ಒತ್ತಡ ಪೆÇೀಷಕರಿಗೆ ಇರುವುದರಿಂದ ಮಕ್ಕಳಿಗೆ 18 ವರ್ಷ ತುಂಬಿದಾಗ ಸತತ ಐದು ವರ್ಷ ಅಪೇಕ್ಷಿತ ಮೊತ್ತವನ್ನು ವಿಮಾ ರಕ್ಷಣೆಯೊಂದಿಗೆ ನೀಡುವುದು ಇದರ ಮೂಲ ಉದ್ದೇಶವಾಗಿದೆ. ಈ ಯೋಜನೆಯು ಬ್ಯಾಂಕಿನ ಎಲ್ಲ 629 ಶಾಖೆಗಳಲ್ಲಿ ಲಭ್ಯವಿದೆ ಎಂದರು.
ಬ್ಯಾಂಕಿನ ಮಾರುಕಟ್ಟೆ ವಿಭಾಗದ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಮಾತನಾಡಿ, ಜೀವನವು ಅನಿಶ್ಚಿತತೆಯಿಂದ ಕೂಡಿರುವುದರಿಂದ ಮಕ್ಕಳ ಭವಿಷ್ಯವನ್ನು ಉದಾಸೀನ ಮಾಡಲಾಗದು. ಪೆÇೀಷಕರು ಇರಲಿ, ಬಿಡಲಿ, ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸ ಸುಲಲಿತವಾಗಿ ಸಾಗಬೇಕೆಂಬ ಆಶಯದೊಂದಿಗೆ ಯೋಜನೆ ಬಿಡುಗಡೆ ಮಾಡಲಾಗಿದೆ ಎಂದರು.
ಕೆನರಾ ಎಚ್.ಎಸ್.ಬಿ.ಸಿ ಜೀವ ನಿಗಮದ ಪ್ರಾದೇಶಿಕ ಮುಖ್ಯಸ್ಥ ರಾಘವೇಂದ್ರ ಧಾರವಾಡಕರ್ ಮಾತನಾಡಿ, ತಮ್ಮ ಸಂಸ್ಥೆ ಸುಮಾರು 115 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಸುಮಾರು 10.000 ಶಾಖೆಗಳ ಮೂಲಕ ಸೇವೆ ನೀಡುತ್ತಲಿದೆ. ಈ ಜೀವ ವಿಮಾ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಎಚ್.ಎಸ್.ಬಿ.ಸಿ ಪಾಲುದಾರಿಕೆ ಹೊಂದಿದೆ ಎಂದರು.
ಉದ್ಯಮಿ ಯಶೋಧರಾ ನಾಯ್ಕ ಮಾತನಾಡಿ, ವಿಮಾ ಯೋಜನೆಯೆಂದರೆ ಸಾವಿಗೆ ಮಾತ್ರ ಸಂಬಂಧಿಸಿದ್ದು ಎಂದು ಭಾವಿಸಬಾರದು. ಅದೊಂದು ಉಳಿತಾಯ ಯೋಜನೆಯಂದೇ ಭಾವಿಸಬೇಕು ಎಂದರು. ಬಡ್ಡಿದರ ಕುಸಿಯುತ್ತಿರುವ ಇಂದಿನ ದಿನಮಾನದಲ್ಲಿ ನಿಶ್ಚಿತ ಪಾವತಿಯನ್ನು ಖಾತರಿಪಡಿಸುತ್ತಿರುವುದು ಶ್ಲಾಘನೀಯ ಎಂದರು.
ಕೆನರಾ ಎಚ್‍ಎಸ್‍ಬಿಸಿ ಜೀವ ವಿಮಾ ನಿಗಮದ ತರಬೇತಿ ಮುಖ್ಯಸ್ಥ ರಾಘವೇಂದ್ರ ಕಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಪ್ರಬಂಧಕ ರೋಶನ ಕುಮಾರ, ಶಿವಾನಂದ ಭಟ್ಟ, ಕೆನರಾ ಎಚ್‍ಎಸ್‍ಬಿಸಿಯ ಸ್ಥಳೀಯ ವ್ಯವಸ್ಥಾಪಕ ಗೌರೀಶ ಮೊದಲಾದವರು ಉಪಸ್ಥಿತರಿದ್ದರು.