• first
    second
    third
    previous arrow
    next arrow
  • ಸೆಲ್ಕೋ ಸೋಲಾರ್ ಮುತುವರ್ಜಿ; ಬಡ ಕುಟುಂಬದ ಮನೆಗಳಲ್ಲಿ ಪ್ರಜ್ವಲಿಸಿದ ಬೆಳಕು

    300x250 AD

    ಯಲ್ಲಾಪುರ: ಇತ್ತೀಚಿಗಿನ ಭಾರೀ ಮಳೆ ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ ಇಡಗುಂದಿ ಪಂಚಾಯತ ವ್ಯಾಪ್ತಿಯ ಅರಬೈಲಿನ ಕೆಲವು ಬಡ ಕುಟುಂಬಗಳಿಗೆ ಸೆಲ್ಕೋ ಸಂಸ್ಥೆ ಬೆಂಗಳೂರು ವಿಶೇಷ ಮುತುವರ್ಜಿವಹಿಸಿ ಉಚಿತವಾಗಿ ಸೋಲಾರ್ ಲೈಟಿಂಗ್ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.


    ಜುಲೈ ತಿಂಗಳ ಪ್ರವಾಹದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕೆಲವಷ್ಟು ಮನೆಗಳು ಮುಳುಗಿತ್ತಲ್ಲದೇ ಹಾನಿಯೂ ಆಗಿತ್ತು. ವಿಶೇಷ ಆದ್ಯತಾ ಮೇರೆಗೆ ಹಾನಿಗೊಳಗಾದ ಈ ಪ್ರದೇಶ ಗುರುತಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸುವ ಯೋಜನೆಯಲ್ಲಿ ಸೇರಿಸಿ ಇಲ್ಲಿಯ ಕೆಲವು ಸಿದ್ದಿ, ಆಚಾರಿ ಇನ್ನಿತರ ಕುಟುಂಬಗಳ ಮನೆಗಳಿಗೆ ಸೋಲಾರ್ ಬೆಳಕು ಈಗ ಪ್ರಜ್ವಲಿಸಿದೆ. ಸೆಲ್ಕೋ ಸಂಸ್ಥೆ ಬೆಂಗಳೂರು, ಶಿರಸಿ ಶಾಖೆಯಡಿಯಲ್ಲಿ ಎಂಟು ಕುಟುಂಬಗಳಿಗೆ ಈ ನೆರವು ನೀಡಲಾಗಿದ್ದು ಗುರುವಾರ ವಿದ್ಯುಕ್ತವಾಗಿ ಚಾಲನೆಗೊಳಿಸಲಾಯಿತು.

    ಶಿರಸಿ ಶಾಖಾ ವ್ಯವಸ್ಥಾಪಕ ಸುಬ್ರಾಯ ಹೆಗಡೆ ಈ ಸಂದರ್ಭದಲ್ಲಿ ಮಾತನಾಡಿ,ನಮ್ಮ ಸಂಸ್ಥೆ ಹಲವಾರು ರೀತಿಯಲ್ಲಿ ಜನಪರ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದು ನೆರವಾಗುವ ಕೆಲಸ ಮಾಡುತ್ತಿದೆ. ಈ ಅರಬೈಲ್ ಭಾಗದಲ್ಲಾದ ವಿಶೇಷ ಹಾನಿಯನ್ನು ಪರಿಗಣಿಸಿ ಮತ್ತು ಅವಶ್ಯಕತೆಯನ್ನು ನೋಡಿ ಸಂಸ್ಥೆಯವರೇ ಇಲ್ಲಿ ಉಚಿತವಾಗಿ ಈ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದ ಅವರು ಸಂಸ್ಥೆಯ ಕಾರ್ಯಗಳನ್ನು ವಿವರಿಸಿ ಸೋಲಾರ ಬಳಕೆಯ ವಿಧಾನ ಸುರಕ್ಷತಾ ಕ್ರಮದ ಬಗ್ಗೆ ಸ್ಥಳದಲ್ಲಿ ಫಲಾನುಭವಿಗಳಿಗೆ ಮಾಹಿತಿ ನೀಡಿದರು.

    300x250 AD

    ಈ ಸಂರ್ಭದಲ್ಲಿ ಉಪಸ್ಥಿತರಿದ್ದ ನರಸಿಂಹ ಸಾತೊಡ್ಡಿ ಸೆಲ್ಕೋ ಸಂಸ್ಥೆಯ ಶಿರಸಿ ಶಾಖಾ ವ್ಯವಸ್ಥಾಪಕ ಸುಬ್ರಾಯ ಹೆಗಡೆಯವರನ್ನು ಅಭಿನಂದಿಸಿ ಮಾತನಾಡಿ ಈ ಪ್ರದೇಶಕ್ಕೆ ವ್ಯವಸ್ಥೆಕಲ್ಪಿಸಿಕೊಡುವಂತೆ ನಮ್ಮ ಒಂದೇ ಒಂದು ಕೋರಿಕೆಗೆ ಸೆಲ್ಕೋ ಸಂಸ್ಥೆಯ ಸಿಇಓ ಅವರು ತಕ್ಷಣ ಸ್ಪಂದಿಸಿ ಈಗ ಈ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಉತ್ತಮ ಬಾಳಿಕೆಯ ಸೋಲಾರ್’ನ್ನು ವ್ಯವಸ್ಥಿತ ರೀತಿಯಲ್ಲಿ ಬಡವರ ಮನೆಗಳಿಗೆ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟಿರುವುದಕ್ಕೆ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಸಂಸ್ಥೆಯು ಈ ಪ್ರದೇಶದಲ್ಲಿ ಮಾಡಿರುವುದು ಅಭಿನಂದನಾರ್ಹವಾದುದು ಮತ್ತು ಮಾದರಿಯಾಗಿದೆ ಎಂದು ಹೇಳಿದರು.

    ಫಲಾನುಭವಿಗಳ ಪರವಾಗಿ ಸೋಮಿ ಸಿದ್ದಿ ಮಾತನಾಡಿ ಬಡವರಾದ ನಮಗೆ ಸೋಲರ್ ಬೆಳಕು ತುಂಬಾ ನೆರವಾಗಿದೆ. ದೂರದಿಂದ ಎಲ್ಲಿಂದಲೋ ಬಂದು ನಮಗೆ ಬೆಳಕು ಕೊಟ್ಟಿದ್ದೀರಿ ಸಂತಸವಾಗಿದೆ ಎಂದು ಹೇಳಿದರು. ಸೆಲ್ಕೋ ಸಂಸ್ಥೆಯ ಸ್ಥಳೀಯ ಪ್ರತಿನಿಧಿ ಪ್ರವೀಣ ಹೆಗಡೆ, ಫಲಾನುಭವಿಗಳು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top