ಕಾರವಾರ: ಜಿಲ್ಲೆಯಲ್ಲಿ ಕರೋನಾ ಕಾರಣಕ್ಕೆ ಒಟ್ಟೂ ಮೂರು ಜನರ ಸಾವು ಸಂಭವಿಸಿದ್ದು, ಗುರುವಾರ ರಾತ್ರಿ 71 ರ ಪ್ರಾಯದ ವೃದ್ಧೆಯ ಸಾವು ಸಂಭವಿಸಿದ್ದು, ಮೃತಳ ಶವ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಹೈ ಚರ್ಚ್ ಬಳಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೃತರ ಶವ ಸಂಸ್ಕಾರದ ಯೋಜನೆಗೆ ಮುಂದಾದಾಗ ಸ್ಥಳೀಯರು ಕೆಲಕಾಲ ಪ್ರತಿರೋಧ ಒಡ್ಡಿದ್ದರು ಎಂಬ ಕಾರಣಕ್ಕೆ ಪೋಲೀಸರು ಲಘು ಲಾಠಿ ರುಚಿ ತೋರಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪರಿಸ್ಥಿತಿ ತಿಳಿಗೊಂಡ ನಂತರ ಆ ಸ್ಥಳದಲ್ಲಿಯೇ ಮೃತಳ ಶವ ಸಂಸ್ಕಾರ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಿದೆ.