• Slide
    Slide
    Slide
    previous arrow
    next arrow
  • ಶಶಿಕಲಾ ಜೊಲ್ಲೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ; ಜ್ಯೋತಿ ಆಗ್ರಹ

    300x250 AD

    ಶಿರಸಿ: ಅಂಗನವಾಡಿ ಮಕ್ಕಳಿಗೆ ನೀಡಬೇಕಾದ ಮೊಟ್ಟೆಯಲ್ಲೂ ಲಕ್ಷಾಂತರ ರೂ ಹಗರಣ ಮಾಡಿದ ಸಚಿವೆ ಶಶಿಕಲಾ ಜೊಲ್ಲೆಯವರ ಬಗ್ಗೆ ಜನರ ಸಂದೇಹ ದೂರ ಮಾಡಲು ಸರಕಾರ ತನಿಖೆ ನಡೆಸುವದನ್ನು ಅವರಿಗೆ ಮತ್ತೆ ಮಂತ್ರಿ ಮಾಡಿ, ಇಡೀ ಸರಕಾರವನ್ನು ಸಂದೇಹದಲ್ಲಿ ನೋಡುವಂತೆ ಮಾಡಿದೆ. ತಾವು ಪ್ರಾಮಾಣಿಕ ಸಚಿವೆಯಾಗಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ, ತಾವು ನಿರಪರಾಧಿಯೆಂದು ಸಾಬೀತು ಮಾಡಿ ಸಚಿವರಾಗಲಿಯೆಂದು ರಾಜ್ಯ ಕಾಂಗ್ರೆಸ್ ಲೀಗಲ್ ಸೇಲ್ ಕಾರ್ಯದರ್ಶಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೌಡ ಆಗ್ರಹಿಸಿದ್ದಾರೆ.


    ಸ್ವಚ್ಚ, ಪಾರದರ್ಶಕ ನೀಡುವ ಭರವಸೆ ನೀಡಿದ ಬೊಮ್ಮಾಯಿ ಅವರು ಬೃಷ್ಟಾಚಾರ ಆರೋಪ ಹೊತ್ತವರಿಗೆ ಸಚಿವ ಸ್ಥಾನದಿಂದ ಇಳಿಸಬೇಕು. ಇಲ್ಲದೇ ಹೋದರೆ ಜನರು ಬೀದಿಗಿಳಿದು ಹೋರಾಟ ಮಾಡುವ ಸಾಧ್ಯತೆ ಇದೆ.

    300x250 AD


    ಇನ್ನೂ ಕೇಂದ್ರದಲ್ಲಿ ಬಿಜೆಪಿ ಸರಕಾರವಂತೂ ದೇಶದ ಜನರ ನೆಮ್ಮದಿ, ಬದುಕು ಸಂಕಟಕ್ಕೆ ದೂಡಿದೆ. ಎಲ್ಲ ದೈನಂದಿನ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜೊತೆಗೆ ತೈಲ ದರಗಳು ಬಹಳ ಏರಿದೆ. ಇದನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ. ಕೊರೊನ ಸಂಕಷ್ಟದಲ್ಲಿ ಜನರು ಬಹಳ ತೊಂದರೆಯಲ್ಲಿರುವ ತೈಲ ಬೆಲೆ, ನಿತ್ಯ ಬಳಕೆ ವಸ್ತುಗಳ ಏರಿಕೆಯು ಪ್ರತಿ ಮನೆಯ ಮಹಿಳೆ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಹೆಚ್ಚುವರಿ ಎಂಬಂತೆ ಗ್ಯಾಸ ದರವೂ 25 ರೂ ಏರಿಸಿ ಮತ್ತೆ ಗಾಯದ ಮೇಲೆ ಬರೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರದ ನಿಲುವಿನಿಂದ ರೋಸಿಹೋದ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ. ಹಿಂದೆ ಬಿಜೆಪಿಯವರು ಕಾಂಗ್ರೆಸ್ ಸರಕಾರದಲ್ಲಿ 1 ರೂ ದರ ಏರಿದರೂ ಉಗ್ರ ಹೋರಾಟ ಮಾಡುತ್ತಿದ್ದರು. ಶೋಭಾ ಕರಂಲಾಜೆ, ಸ್ಮøತಿ ಇರಾನಿ ಅವರು ಮನಮೋಹನ ಸಿಂಗಗೆ ಬಳೆ ಕಳುಹಿಸಿದ್ದರು. ಈಗ ಮೋದಿ ಅವರ ಬೆಲೆ ಏರಿಕೆ ನೀತಿಗೆ ಜನಸಾಮಾನ್ಯರೇ ಬಳೆ ಕಳುಹಿಸಿ ಹೋರಾಟ ಮಾಡಲಿದ್ದಾರೆಂದು ಜ್ಯೋತಿ ಪಾಟೀಲ ಎಚ್ಚರಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top