ನವದೆಹಲಿ: ದೇಶದಲ್ಲಿ ಈವರೆಗೆ 50 ಕೋಟಿಗೂ ಅಧಿಕ ಜನರಿಗೆ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ವರದಿಯಲ್ಲಿ ತಿಳಿಸಿದೆ.
ಆಗಸ್ಟ್ ತಿಂಗಳಲ್ಲಿ ದೈನಂದಿನ ಪರೀಕ್ಷೆಯ ಸರಾಸರಿ 17 ಲಕ್ಷಕ್ಕೂ ಹೆಚ್ಚಿದೆ. ದೇಶದಲ್ಲಿ ಕಳೆದ 55 ದಿನಗಳಲ್ಲಿ 10 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ವರ್ಷ ಜುಲೈ 21 ರ ವರೆಗೆ 45 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಆಗಸ್ಟ್ 18 ರ ವರಿಗಿನ ಅವಧಿಯಲ್ಲಿ ಈ ಸಂಖ್ಯೆ 50 ಕೋಟಿ ದಾಟಿರುವುದಾಗಿ ವರದಿ ಹೇಳಿದೆ.
ಇದುವರೆಗೆ ದೇಶದಲ್ಲಿ 50,03,00,840 ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಾದ್ಯಂತ ತನ್ನ ಪರೀಕ್ಷಾ ಸಾಮಥ್ರ್ಯವನ್ನು ಐಸಿಎಂಆರ್ ಏರಿಕೆ ಮಾಡುತ್ತಿದೆ. ತಂತ್ರಜ್ಞಾನ ಸದ್ಬಳಕೆ ಮತ್ತು ಕೈಗೆಟುಕುವ ದರದಲ್ಲಿ ಡಯೋಗ್ನೋಸ್ಟಿಕ್ ಕಿಟ್‍ಗಳಲ್ಲಿ ನಾವಿನ್ಯತೆ ತರುವ ಮೂಲಕ ಪರೀಕ್ಷಾ ಸಾಮಥ್ರ್ಯ ಹೆಚ್ಚಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ನ್ಯೂಸ್ 13