ಸಿದ್ದಾಪುರ: ತಾಲೂಕಿನ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹಸರಗೋಡ ಪಂಚಾಯತದ ತಲ್ಲನಜಡ್ಡಿ, ಅಣಲೇಬೈಲ್ ಪಂಚಾಯತ್ ವ್ಯಾಪ್ತಿಯ ಮೂರೂರು ಹೊಸ್ಪೇಟೆಬೈಲದ ಪರಿಶಿಷ್ಟ ಜಾತಿ ಕಾಲೊನಿ, ಹೆಗ್ಗರಣಿ ಪ್ರದೇಶದ ತಾರೇಸರ ಹಾಗೂ ಬಿದ್ರಕಾನ ಪಂಚಾಯತ್ ವ್ಯಾಪ್ತಿಯ ಐದ್ನಳ್ಳಿಯಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಮನೆ, ತೋಟ, ಗದ್ದೆ ಪ್ರದೇಶಗಳ ಪರಿವೀಕ್ಷಣೆ ನಡೆಸಿದರು. ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.