ಶಿರಸಿ: ಬೆಂಗಳೂರಿನಲ್ಲಿ ನೂತನ ಅರಣ್ಯ ಸಚಿವ ಉಮೇಶ್ ಕತ್ತಿಯವರನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಇಂದು ಭೇಟಿ ಮಾಡಿದರು.
ಮಲೆನಾಡಿನಲ್ಲಿ ನಡೆದ ಭೂಕುಸಿತದ ಪರಿಸ್ಥಿತಿ ಬಗ್ಗೆ ಅಶೀಸರ ವಿವರಿಸಿದರು. ರಾಜ್ಯದ ಜೀವವೈವಿಧ್ಯ ಅರಣ್ಯ ಪರಿಸ್ಥಿತಿ ಬಗ್ಗೆ ಅಧ್ಯಯನ ವರದಿಗಳನ್ನು ನೀಡಿದರು. ರಾಜ್ಯದ ಡೀಮ್ಸ್ ಅರಣ್ಯಗಳ ರಕ್ಷಣೆಯಾಗಬೇಕೆಂದು ಮನವಿ ಮಾಡಿದರು. ಬಯಲು ಸೀಮೆಗಳಲ್ಲಿ ವ್ಯಾಪಕ ವನೀಕರಣ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದರು.
ಈ ಸಂದರ್ಭದಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿಯವರು ಮಲೆನಾಡಿನ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಲಿದ್ದೇನೆ. ತಜ್ಞರ ಸಲಹೆಗಳನ್ನು ಶಿಫಾರಸುಗಳನ್ನು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.