ಯಲ್ಲಾಪುರ: ಲಾರಿಯಲ್ಲಿ ಸರಕುಗಳನ್ನು ಏರಿಸುವುದು ಮತ್ತು ಇಳಿಸುವುದಕ್ಕೆ ವಾರ್ನಿ ಮಾಮೂಲಿ ಹೆಸರಿನಲ್ಲಿ ಮಾಲಿಕರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಲಾರಿ ಮಾಲಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸರಕಿನ ಮಾಲಿಕರೇ ಹಮಾಲಿ ವೆಚ್ಚವನ್ನು ಭರಿಸಬೇಕಂದು, ನಮ್ಮ ಸಮಿತಿಯ ತೀರ್ಮಾನಿಸಿದೆ. ಲಾರಿಯ ಮಾಲಿಕರು ಯಾವುದೇ ವಾರ್ನಿ ಮಾಮೂಲಿಯನ್ನು ನೀಡುವುದಿಲ್ಲ. ಸರಕಿನ ಮಾಲೀಕರೇ ಅದನ್ನು ಭರಿಸಿಕೊಳ್ಳಬೇಕು. ಹೀಗಿದ್ದರೂ ವರ್ತಕರು, ಕೈಗಾರಿಕೋದ್ಯಮಿಗಳು, ಮಾಲಕರೇ ವಾರ್ನಿ ಭರಿಸಿಕೊಳ್ಳಬೇಕೆನ್ನುವ ನೀತಿಯಿಂದ ನಮಗೆ ಅನ್ಯಾಯ ಆಗುತ್ತಿದೆ. ಕರೊನಾ ಸಂಕಷ್ಟ, ತೈಲ ಬೆಲೆ ಏರಿಕೆ ನಡುವೆ ವ್ಯವಹಾರ ನಡೆಸಿಕೊಂಡು ಹೋಗುವುದೇ ಸವಾಲಾಗಿದೆ. ಕಾರಣ ನಮ್ಮ ಸಂಘಟನೆ ತೆಗೆದುಕೊಂಡ ತೀರ್ಮಾನದಂತೆ ನಾವು ನಡೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಮನವಿ ಮೂಲಕ ತಿಳಿಸಿದರು.
ಯಲ್ಲಾಪುರ ಲಾರಿ ಮಾಲೀಕರ ಸಂಘದ ಪ್ರಮುಖರಾದ ನವೀನ ನಾಯ್ಕ, ನಾಗೇಂದ್ರ ಭಟ್ಟ, ಸುಜಯ ಮರಾಠೆ, ಖಾಜಾ ಅತ್ತಾರ, ಮುರಳಿ ರಾವಲ, ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಪ್ರಮುಖರಾದ ಗಯಬು ಹೊನ್ನಾಳಿ, ಗಂಗಾಧರ ಹೊಸಮನಿ, ಪ್ರಭಾಕರ ಉಪಾಧ್ಯ ಇದ್ದರು.