ಶಿರಸಿ: ತಾಲೂಕಿನಲ್ಲಿ ಆ.20 ಶುಕ್ರವಾರ ಒಟ್ಟೂ 2,650 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಮೊದಲ ಮತ್ತು 2ನೇ ಡೋಸ್ ಲಸಿಕೆ ಪಡೆಯುವವರು ಪಡೆದುಕೊಳ್ಳಬಹುದೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಲಭ್ಯವಿರುವ 2650 ಕೋವಿಶೀಲ್ಡ್ ಲಸಿಕೆಯನ್ನು ತಾಲೂಕಿನ ಬನವಾಸಿಯಲ್ಲಿ 300, ಹೆಗಡೆಕಟ್ಟಾದಲ್ಲಿ 300, ಸಾಲ್ಕಣಿಯಲ್ಲಿ 250, ಮೆಣಸಿ 100, ಕಕ್ಕಳ್ಳಿ 200, ಹುಲೇಕಲ್ 200, ಬಿಸಲಕೊಪ್ಪ 200, ದಾಸನಕೊಪ್ಪ 200, ರೇವಣಕಟ್ಟಾ 200, ಸುಗಾವಿ 200, ಸಿಂಪಿಗಲ್ಲಿ ರುದ್ರ ದೇವಚರ ಮಠದಲ್ಲಿ 200, ಅಗಸೆ ಬಾಗಿಲಿನ ಬಾಲ ಯೇಸು ಮಂದಿರದಲ್ಲಿ 26,27,28 ನೇ ವಾರ್ಡ್ ನಂಬರ್ ನವರಿಗೆ ಒಟ್ಟೂ 300 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.