ಶಿರಸಿ: ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮೀತಿ ಅಗಸಾಲ- ಬೊಮ್ನಳ್ಳಿ ಶಿರಸಿ ಇವರ ಆಶ್ರಯದಲ್ಲಿ ‘ಪರಿಸರ ಭವನ’ ಉದ್ಘಾಟನಾ ಸಮಾರಂಭ ಆ.20 ಶುಕ್ರವಾರ ಬೆಳಿಗ್ಗೆ 10 ರಿಂದ ಅಗಸಾಲ-ಬೊಮ್ನಳ್ಳಿ ಶಾಲಾ ಆವಾರದಲ್ಲಿ ನಡೆಯಲಿದೆ.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಉದ್ಘಾಟಿಸಲಿದ್ದಾರೆ. ಗ್ರಾಮ ಅರಣ್ಯ ಸಮಿತಿ ಅಗಸಾಲ-ಬೊಮ್ನಳ್ಳಿ ಅಧ್ಯಕ್ಷ ವಿಶ್ವನಾಥ ಹೆಗಡೆ ಬುಗುಡಿಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿಎಫ್‍ಒ ಎಸ್.ಜಿ ಹೆಗಡೆ, ಎಸಿಎಫ್ ಅಶೋಕ ಅಲಗೂರ್, ಆರ್.ಎಫ್‍ಒ ಬಸವರಾಜ ಬೊಚ್ಚಲ್ಲಿ, ಗ್ರಾ.ಪಂ ಸದಸ್ಯ ಪ್ರಕಾಶ ಹೆಗಡೆ ಹಲಗೆ, ವಿ.ಎನ್ ಹೆಗಡೆ ಬೊಮ್ನಳ್ಳಿ ಇರುವರು.