• first
    second
    third
    previous arrow
    next arrow
  • ಕೊರೊನಾ 3ನೇ ಅಲೆ ಭೀತಿ; ದಾಂಡೇಲಿ- ಜೊಯಿಡಾದಲ್ಲಿ ಜಲಕ್ರೀಡೆ ನಿಷೇಧ

    300x250 AD

    ಜೋಯಿಡಾ: ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ‌ ಮಾಡಿ ಜನಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜಿಲ್ಲೆಯ ಪ್ರವಾಸೋದ್ಯಮವೂ ಇದಕ್ಕೆ ಹೊರತಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಿವರ್ ರ್ಯಾಪ್ಟಿಂಗ್ ನಂತಹ ಜಲಕ್ರೀಡೆಗಳನ್ನು ನಡೆಸುವ ಪ್ರವಾಸೋದ್ಯಮಿಗಳು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕೋವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ಜೊಯಿಡಾ ಹಾಗೂ ದಾಂಡೆಲಿಗಳ ಪ್ರಮುಖ ಪ್ರವಾಸೀ ಆಕರ್ಷಣೆಯಾಗಿದ್ದ ರಿವಫ಼್ ರ್ಯಾಪ್ಟೀಂಗ್ ಮುಂತಾದ ಜಲಕ್ರೀಡೆಗಳನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಪ್ರವಾಸೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೆಸಾರ್ಟ್ ಮಾಲೀಕರು, ರ್ಯಾಪ್ಟಿಂಗ್ ಗಳಲ್ಲಿ ಕೆಲಸಮಾಡುವ ಮಾರ್ಗದರ್ಶಕರು ಅಲ್ಲದೇ ಪ್ರವಾಸೀ ಚಟುವಟಿಕೆಗಳಲ್ಲಿ ಭಾಗವಹಿಸುವ ಅನೇಕರು ಮತ್ತೆ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸಲು ಪರದಾಡುವಂತಾಗಿದೆ.

    ಈ ಹಿಂದಿನ ಲಾಕ್ ಡೌನ್ ಮುಗಿದ ಮೇಲೆ ಪ್ರವಾಸೋದ್ಯಮದ ಚಟುವಟಿಕೆಗಳಿಗೆ ತುಸು ಸಡಿಲಿಕೆ ಸಿಕ್ಕಿ‌ ಚೇತರಿಸಿ ಕೊಳ್ಳುತ್ತಿರುವಾಗಲೇ ಈಗ ಮತ್ತೆ ಚಟುವಟಿಕಗಳಿಗೆ ನಿಷೇದ ಹೇರಲಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ತೊಡಗಿಸಿರುವವರ ನಷ್ಟ ಒಂದೆಡೆಯಾದರೆ ಅಲ್ಲಿನ ಚಟುವಟಿಕೆಗಳಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರು ಬದುಕಲು ಉತ್ಪನ್ನವಿಲ್ಲದೇ ಪರದಾಡುವಂತಾಗಿದೆ.

    300x250 AD

    ವಂಡರ್ಲಾ ಗಳಂತಹ ದೊಡ್ಡ ದೊಡ್ಡ ಕೇಂದ್ರಗಳಲ್ಲಿ ಜಲಕ್ರೀಡೆ ನಡೆಸಲು ಅನುಮತಿ ನೀಡಲಾಗಿದೆ. ಅಲ್ಲದೇ ಇತ್ತಿಚೆಗೆ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಲಾಗುತ್ತಿದೆ ಆದರೆ ಜಿಲ್ಲೆಯ ಜಲಕ್ರೀಡೆಗಳಿಗೆ ನಿಷೇಧ ಹೇರಲಾಗುತ್ತಿದೆ. ರಾಜಕೀಯ ಪಕ್ಷಗಳ ದೊಡ್ಡ ದೊಡ್ಡ ಸಮಾರಂಭಗಳು ರ್ಯಾಲಿಗಳು ನಡೆಯುತ್ತಲೇ ಇವೆ ಆದರೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮಾತ್ರ ನಿರ್ಬಂಧ ಹೇರುವುದು ಎಷ್ಟು ಸರಿ? ಎಂಬುದು ಪ್ರವಾಸೋದ್ಯಮಿಗಳು ಹಾಗೂ ಅಲ್ಲಿನ ಕೆಲಸಗಾರರು ಹೇಳುವ ಮಾತು‌.

    ಈ ಕುರಿತು ಸರ್ಕಾರ ಚಿಂತನೆ ನಡೆಸಬೇಕು, ಜಿಲ್ಲಾಡಳಿತದ ವತಿಯಿಂದ ಜಲಕ್ರೀಡೆಗಳಿಗೆ ಅನುಮತಿ ನೀಡಿ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡಿರುವ ನೂರಾರು ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಅಲ್ಲಿನ ಪ್ರವಾಸೋದ್ಯಮಿಗಳ ಹಾಗೂ ಕೆಲಸಗಾರರ ಅಭಿಪ್ರಾಯ.

    Share This
    300x250 AD
    300x250 AD
    300x250 AD
    Leaderboard Ad
    Back to top