EUK ವಿಶೇಷ ವರದಿ: ರಾಜ್ಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಒಂದು ನವೀನ ರೀತಿಯ ಕಾರ್ಯಕ್ರಮ ನಗರದ ಕೋಟೆಕೆರೆಯ ಬಯಲಲ್ಲಿ ನಡೆಯುತ್ತಿದೆ. ಸರ್ಕಸ್, ಜಾದು, 3Dವಿಡಿಯೋಗಳಿಗಿಂತ ಹೊರತಾಗಿ ಸ್ಥಳೀಯ ಕಲಾವಿದರುಗಳಿಂದ ರಚಿತವಾದ ಮತ್ತು ನಡೆಸಲ್ಪಡುತ್ತಿರುವ “ಪೊಪೆಟ್ ಶೋ” ಜಾತ್ರೆಗೆ ಆಗಮಿಸಿದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಶಾಲಾ ಮಕ್ಕಳಿಂದ ಇಳಿ ವಯಸ್ಸಿನರನ್ನೂ ಮುದ ಮತ್ತು ಆಕರ್ಷಿಸುತ್ತಿರುವ ಶೋ ಇದಾಗಿದೆ.
ಅಕ್ಷಯ ಜೆ ಮಾಷಲ್ಕರ್ ಅವರ ನಿರ್ದೇಶನ ಮತ್ತು ರಾಜಾರಾಮ ಹೆಗಡೆ ಕುಕ್ರಿ ಮತ್ತು ಪ್ರವೀಣ ಆಚಾರಿ ಅವರ ಅದ್ಭುತ ಪರಿಕಲ್ಪನೆಯಲ್ಲಿ ಮೂಡಿ ಬರುತ್ತಿರುವ ಪೊಪೆಟ್ ಶೋ ಮನೋರಂಜನೆಯ ಜೊತೆಗೆ ಉತ್ತಮ ತಿಳುವಳಿಕೆ ನೀಡುವ ಕಾರ್ಯಕ್ರಮ. ಪಾಲಕರು ತಮ್ಮ ಮಕ್ಕಳ ಜೊತೆಗೆ ನೋಡಲೇಬೇಕಾದ ಒಂದು ಉತ್ಕೃಷ್ಟ ಶೋ ಇದಾಗಿದೆ. ಜಾತ್ರೆಯಲ್ಲಿ ಮನೋರಂಜನೆ ನೀಡುವ ಕಾರ್ಯಕ್ರಮವನ್ನು ಮಾತ್ರ ನಾವು ಈ ಹಿಂದೆ ನೋಡಿರುತ್ತೇವೆ. ಆದರೆ ಮನರಂಜನೆ ಜೊತೆಗೆ ಮಕ್ಕಳಿಗೆ ಶೈಕ್ಷಣಿಕ ಮತ್ತು ಬೌದ್ಧಿಕ ಜ್ಞಾನವನ್ನು ನೀಡುವುದರ ಜೊತೆಗೆ ಕ್ರಿಯಾಶೀಲತೆಯನ್ನು ಇದು ಹೆಚ್ಚಿಸುತ್ತದೆ. ಕೇವಲ 15 ನಿಮಿಷಗಳ ಪ್ರದರ್ಶನ ಇದಾಗಿದ್ದು, ಪ್ರತಿದಿನ ಸಂಜೆ 4 ಘಂಟೆಯಿಂದ ಆರಂಭಗೊಳ್ಳುತ್ತದೆ. ಮಾರಿಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನ ನೀಡಿರುವ ಇವರ ಕಾರ್ಯಕ್ರಮ ದಿನದಿಂದ ದಿನಕ್ಕೆ ಹೆಚ್ಚು ಪ್ರಶಂಸೆಗೆ ಪಾತ್ರವಾಗುತ್ತಿದೆ.
euttarakannada.in
ಈ ಜಾತ್ರೆಯಲ್ಲಿ ನೀವು ನೋಡಲೇಬೇಕು ಕೋಟೆಕೆರೆಯ “ಪೊಪೆಟ್ ಶೋ”; ಹೆಚ್ಚುತ್ತಿದೆ ಜನಪ್ರಿಯತೆ, ಡ್ರ್ಯಾಗನ್ ಕೌತುಕಥೆ
