ಯಲ್ಲಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸುಜ್ಞಾನ ನೆಟ್‌ವರ್ಕ್ಸ್ ಯಲ್ಲಾಪುರ ಇವರ ಇ-ಯಲ್ಲಾಪುರ.ಕಾಮ್ ಡಿಜಿಟಲ್ ಮಾಧ್ಯಮದ ವತಿಯಿಂದ ‘ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷದ ಪೋಟೋ ಸ್ಪರ್ಧೆ’ ಯನ್ನು ಆಯೋಜಿಸಲಾಗಿದೆ.
ಆಸಕ್ತರು ತಮ್ಮ 6 ವರ್ಷದೊಳಗಿನ ಮಕ್ಕಳ ಮುದ್ದುಕೃಷ್ಣ ವೇಷದ ಫೋಟೋವನ್ನು ಕಳಿಸಲು ಕೋರಲಾಗಿದೆ. ನಿರ್ಣಾಯಕರಿಂದ ಆಯ್ಕೆಯಾದ ಮೂರು ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಿ, ನಗದು ಬಹುಮಾನ, ಪಾರಿತೋಷಕ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ಈ ಸ್ಪರ್ಧೆಯ ನಿಯಮಾವಳಿಯಂತೆ ಸ್ಫರ್ಧೆಯಲ್ಲಿ ಭಾಗವಹಿಸಲು ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಯಾವುದೇ ಪ್ರದೇಶದ 6 ವರ್ಷದೊಳಗಿನ ಮಕ್ಕಳ ಮುದ್ದು ಕೃಷ್ಣ ವೇಷದ ಫೋಟೊವನ್ನು ಕೆಳಗೆ ನೀಡಲಾದ ವ್ಯಾಟ್ಸ್‌ಆಪ್ ನಂಬರಿಗೆ ಕಳಿಸಬೇಕು. ಈ ಸ್ಪರ್ಧೆಗೆಂದೇ ಕ್ಲಿಕ್ಕಿಸಿದ ಫೋಟೋ ಆಗಿರಬೇಕು.
ಫೋಟೋದೊಂದಿಗೆ ಮಗುವಿನ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಹಾಗೂ ಸಂಪರ್ಕ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿ ಕಳಿಸಬೇಕು. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಮುದ್ದುಕೃಷ್ಣ ವೇಷದ ಫೋಟೋ ಕಳಿಸಲು ಆ.27 ಕೊನೆಯ ದಿನಾಂಕವಾಗಿರುತ್ತದೆ. ಈ ಸ್ಪರ್ಧೆಯ ಸಹಪ್ರಾಯೋಜಕತ್ವವನ್ನು ಯಲ್ಲಾಪುರ ಪಟ್ಟಣದ ಖ್ಯಾತ ಆಭರಣ ಮಳಿಗೆಯಾದ ಗೌತಮ ಜುವೆಲ್ಲರ‍್ಸ್ ಮಾಲಿಕ ಪ್ರಕಾಶ ಮೋಹನ ಶೇಟ್ ಅವರು ವಹಿಸಿಕೊಂಡಿದ್ದು, ಆಯ್ಕೆಯಾದ, ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನವನ್ನು ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುದ್ದುಕೃಷ್ಣವೇಶ ಫೋಟೋವನ್ನು ಕಳಿಸಬೇಕಾದ ವ್ಯಾಟ್ಸ್‌ಆಪ್ ನಂಬರ್; 9481781038