ಶಿರಸಿ: ತಾಲೂಕಿನ ಶ್ರೀ ಗಜಾನನ ಮಾಧ್ಯಮಿಕ ಶಾಲೆ ವಾನಳ್ಳಿಯ ವಿದ್ಯಾರ್ಥಿಗಳು 2020-21 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಾದ ಎಲ್ಲ 34 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯ ಫಲಿತಾಂಶ ಶೇ.100ರಷ್ಟಾಗಿದ್ದು ಗುಣಾತ್ಮಕ ಶ್ರೇಣಿ `ಎ’ ಆಗಿದೆ.
ವರ್ಷಾ ದತ್ತಾತ್ರೇಯ ಭಟ್ಟ ಬೇಕೆಮಠ ಇವಳು 619/ 625 (ಶೇ.99.04) ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ, ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ವಿನಾಯಕ ನರಹರಿ ಭಟ್ಟ ಕಗ್ಗುಂಡಿ 615/ 625 (ಶೇ.98.04) ಅಂಕ ಗಳಿಸಿ, ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಧನ್ಯಾ ದೇವಡಿಗ ಮತ್ತು ಸುಮಿತ್ರಾ ಮರಾಠಿ 583/ 625 (ಶೇ.93.28)ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ-2, ಇಂಗ್ಲಿಷ್-1, ಸಂಸ್ಕøತ-4, ಗಣಿತ-1, ವಿಜ್ಞಾನ-1 ರಲ್ಲಿ ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ದಾಖಲೆಯ ಫಲಿತಾಂಶ ನೀಡಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪಾಲಕರು ಅಭಿನಂದಿಸಿದ್ದಾರೆ.