ಕಿಂ ಚಾನ್ಯೈಃ ಸುಕುಲಾಚಾರೈಃ ಸೇವ್ಯತಾಮೇತಿ ಪೂರುಷಃ
ಧನಹೀನಃ ಸ್ವಪತ್ನೀಭಿಸ್ತ್ಯಜ್ಯತೇ ಕಿಂ ಪುನಃ ಪರೈಃ ||
ಸುಭಾಷಿತಕಾರರಿಗೆ ಹಣದ ಮಹತ್ತನ್ನು ಹೇಳಿದಷ್ಟೂ ಸಾಲದು. ಒಂದಿಲ್ಲೊಂದು ರೀತಿಯಲ್ಲಿ ಹಣದ ಮೌಲ್ಯದ ಕುರಿತಾಗಿ ಆಗಾಗ ಮಾತುಗಳು ಬರುತ್ತಲೇ ಇರುತ್ತವೆ. ತನ್ನ ಕುಲದ ಬಹುಪುರಾತನವಾದ ಆಚಾರಗಳನ್ನೆಲ್ಲ ಪರಿಪಾಲಿಸುವ ಕಾರಣದಿಂದಾಗಿಯಲ್ಲ ಒಬ್ಬ ಪುರುಷನು ಆದರಣೀಯನೆನಿಸಿಕೊಳ್ಳುವುದು. ಬದಲಿಗೆ ಅವನನ್ನು ಗೌರವಾರ್ಹನನ್ನಾಗಿಸುವುದು ಹಣವೇ ಆಗಿದೆ. ಹಣವಿಲ್ಲದವನನ್ನು ಸ್ವತಃ ಅವನ ಹೆಂಡತಿಯೇ ಬಿಟ್ಟುಹೋಗುತ್ತಾಳೆ, ಇನ್ನು ಬೇರೆಯವರ ವಿಷಯ ಹೇಳಲಿಕ್ಕಿದೆಯೇನು! ಹಾಗಾಗಿ ಜಗತ್ತಿನಲ್ಲಿ ಗೌರವದ ಮೂಲವು ವ್ಯಾಪಕವಾಗಿ ಹಣವೇ ಆಗಿದೆ.
ಶ್ರೀ ನವೀನ ಗಂಗೋತ್ರಿ
ಸುವಿಚಾರ
