• Slide
    Slide
    Slide
    previous arrow
    next arrow
  • ಖಗೋಳಾಸಕ್ತರಿಗೆ ಹಬ್ಬ; ಜು.14 ರಿಂದ ಧೂಮಕೇತುವಿನ ದರ್ಶನ

    300x250 AD

    ಶಿರಸಿ: ಇದೇ ಮಂಗಳವಾರದಿಂದ 20 ದಿನಗಳ ಕಾಲ ನಿಯೋವೈಸ್ ಧೂಮಕೇತುವನ್ನು (C /2020 ಎಫ್ 3) ಕಣ್ತುಂಬಿಕೊಳ್ಳಲು ಖಗೋಳಾಸಕ್ತರಿಗೆ ಅವಕಾಶ ಸಿಕ್ಕಿದೆ.

    ಮಂಗಳವಾರದಿಂದ ಪ್ರತಿ ದಿನ ಸುಮಾರು 20 ನಿಮಿಷಗಳ ಕಾಲ ಈ ಅದ್ಭುತ ಆಕಾಶಕಾಯ ಗೋಚರಿಸಲಿದೆ, ಬರಿಗಣ್ಣಿನಿಂದ ಇದನ್ನು ವೀಕ್ಷಿಸಲು ಸಾಧ್ಯವಿದೆ. ಆಗಸದ ವಾಯುವ್ಯ ಭಾಗದಲ್ಲಿ ಜು.14ರಿಂದ ಮುಂದಿನ 20 ದಿನಗಳವರೆಗೆ ಇದು ಗೋಚರಿಸಲಿದೆ. ಸೂರ್ಯಾಸ್ತದ ಬಳಿಕ ಸುಮಾರು 20 ನಿಮಿಷಗಳ ಕಾಲ ಇದು ಕಾಣಿಸಲಿದ್ದು, ಬರಿಗಣ್ಣಿನಿಂದ ವೀಕ್ಷಿಸಬಹುದು. ಜುಲೈ 22-23ರಂದು ಭೂಮಿಯ ಅತ್ಯಂತ ಸಮೀಪಕ್ಕೆ ಧೂಮಕೇತು ಬರಲಿದೆ. ಮುಂದೆ ಈ ಧೂಮಕೇತುವಿನ ದರ್ಶನ 6000 ವರ್ಷಗಳ ನಂತರ ಎಂದು ಒಡಿಶಾ ಪ್ಲಾನೆಟೋರಿಯಂನ ಉಪ ನಿರ್ದೇಶಕ ಡಾ. ಸುಧೀಂದ್ರ ಪಾಟ್ನಾಯಕ್ ಹೇಳಿದ್ದಾರೆ.

    ನಾಸಾದ ನಿಯೋವೈಸ್ (ನಿಯರ್ ಅರ್ಥ್ ವೈಡ್-ಫೀಲ್ಡ್ ಇನ್‌ಫ್ರಾರೆಡ್ ಸರ್ವೇ ಎಕ್ಸ್‌ಪ್ಲೋರರ್) ಟೆಲಿಸ್ಕೋಪ್ ಕಳೆದ ಮಾರ್ಚ್ 27ರಂದು ಈ ಧೂಮಕೇತುವನ್ನು ಪತ್ತೆ ಹಚ್ಚಿತ್ತು.

    300x250 AD

    ಈಗೆಲ್ಲಿದೆ ? ಆಗಸ್ಟ್‌ನಲ್ಲಿ ಕಣ್ಮರೆ: ಪ್ರಸ್ತುತ ಈ ಧೂಮಕೇತು ಭೂಮಿಯಿಂದ 20 ಕೋಟಿ ಕಿಮೀ ದೂರದಲ್ಲಿ ಪರಿಭ್ರಮಿಸುತ್ತಿದೆ. ಜು.22 ರಂದು ಭೂಮಿಯ ಸಮೀಪಕ್ಕೆ ಅಂದರೆ 10.30 ಕೋಟಿ ಕಿ.ಮೀಯಷ್ಟು ಹತ್ತಿರಕ್ಕೆ ಆಗಮಿಸಲಿದ್ದು, ಈಗ ಅದು ಸ್ಪಷ್ಟವಾಗಿ ಗೋಚರಿಸಲಿದೆ. ಆಗಸ್ಟ್ ತಿಂಗಳು ಸಮೀಪಿಸಿದಂತೆ ಧೂಮಕೇತು ಕಣ್ಮರೆಯಾಗಲಿದ್ದು, ನಂತರ ಅದು ಬರಿಗಣ್ಣಿಗೆ ಕಾಣ ಸಿಗುವುದಿಲ್ಲ. ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ಇದು ಸ್ವಲ್ಪಮಟ್ಟಿಗೆ ಗೋಚರಿಸಬಹುದು.

    Share This
    300x250 AD
    300x250 AD
    300x250 AD
    Leaderboard Ad
    Back to top