ಯಲ್ಲಾಪುರ: ತಾಲೂಕಿನಲ್ಲಿ ಆ.18 ಬುಧವಾರದಂದು 3 ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಅವುಗಳಲ್ಲಿ ಇಬ್ಬರು ಯಲ್ಲಾಪುರದಲ್ಲಿ ಹಾಗೂ ಒಬ್ಬರು ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ತಾಲೂಕಿನಾದ್ಯಂತ ಒಟ್ಟೂ 378 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.
ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟೂ 3,954 ಮಂದಿಗೆ ಕರೋನಾ ಸೋಂಕು ತಗುಲಿದ್ದು ಅವುಗಳಲ್ಲಿ ಒಟ್ಟೂ 3,896 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ . ಹಾಗೂ ಒಟ್ಟೂ 34 ಮಂದಿ ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ.