ಕುಮಟಾ: ಪ್ರವಾಸಕ್ಕೆಂದು ಬಂದು ತಾಲೂಕಿನ ಬಾಡ ಹುಬ್ಬಣಗೇರಿಯ ಬಳಿ ಸಮುದ್ರಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಎರಡು ದಿನಗಳ ನಂತರ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.
ದಾವಣಗೆರೆಯಿಂದ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಈರ್ವರು ಸಮುದ್ರಕ್ಕೆ ತೆರಳಿದ್ದ ವೇಳೆ ಅಲೆಯ ರಭಸಕ್ಕೆ ಸಮುದ್ರಪಾಲಾಗಿದ್ದರು. ಓರ್ವ ಯುವತಿ ಮೇಘ ಎಂ (24) ಮೃತದೇಹ ಅಗಸ್ಟ್ 16 ರಂದು ಪತ್ತೆಯಾಗಿತ್ತು.ಇನ್ನೋರ್ವ ಯುವಕ ರೇಣುಕ್ ಪ್ರಸಾದ (24) ನ ಶವ ಪತ್ತೆಯಾಗದ ಕಾರಣ ಪೆÇೀಲಿಸರು ಶೋಧಕಾರ್ಯ ಮುಂದುವರೆಸಿದ್ದು ಬುಧವಾರ ಮಧ್ಯಾಹ್ನ ಯುವಕನ ಮೃತದೇಹ ಪತ್ತೆಯಾಗಿದೆ.