ಹೊನ್ನಾವರ: ತಾಲೂಕಿನ ಮೂರುಕಟ್ಟೆ ಬಳಿ ಬೈಕ್ ಮತ್ತು ಆಲ್ಟೋ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ವಲ್ಕಿಯ ಅನ್ಸಾರ್ ಅಬ್ದುಲ್ ರೆಹಮಾನ್ ಬೊಂಗ್ಯಾ (45) ಎಂದು ತಿಳಿದಿದ್ದು, ಈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆಲ್ಟೋ ಕಾರ್ ಚಾಲಕ ದನ ಇದೆ ಎನ್ನುವ ಕಾರಣಕ್ಕೆ ಏಕಾಏಕಿ ಕಾರನ್ನು ಬಲಕ್ಕೆ ತಿರುಗಿಸಿದ್ದು, ಈ ವೇಳೆ ಬೈಕ್‍ಗೆ ಗುದ್ದಿದ್ದಾನೆ ಎನ್ನಲಾಗಿದೆ.
ಹೊನ್ನಾವರದಿಂದ ವಲ್ಕಿ ಕಡೆಗೆ ಹೋಗುತ್ತಿದ್ದಾಗ ಮೂರುಕಟ್ಟೆ ಬಳಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ನಲ್ಲಿದ್ದ ಇನ್ನೊಬ್ಬನಿಗೂ ಗಾಯವಾಗಿದೆ. ಕಾರಿನಲ್ಲಿದ್ದ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಾಗಿದ್ದಾರೆ.