• Slide
    Slide
    Slide
    previous arrow
    next arrow
  • ಹಳೆ ವಾಹನ ಗುಜರಿಗೆ, ಹೊಸ ವಾಹನಕ್ಕೆ ಶೇ.25 ರಸ್ತೆ ತೆರಿಗೆ ವಿನಾಯಿತಿ; ಕೇಂದ್ರ ಸೂಚನೆ

    300x250 AD

    ನವದೆಹಲಿ: ದೇಶದ ನೂತನ ಗುಜರಿ ನೀತಿಯ ಅನ್ವಯ, ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಬಳಿಕ ಖರೀದಿ ಮಾಡುವ ಹೊಸ ವಾಹನಗಳಿಗೆ 25% ರಸ್ತೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

    ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದು, ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಈ ವಿನಾಯಿತಿ ನೀಡಲು ಮುಂದಾಗಿಲ್ಲ. ಬದಲಾಗಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ನೂತನ ರಾಷ್ಟ್ರೀಯ ಅಟೋಮೊಬೈಲ್ ಗುಜರಿ ನೀತಿ ಅನುಷ್ಠಾನಗೊಂಡ ಬಳಿಕ ರಾಜ್ಯಗಳ ಆದಾಯ ಹೆಚ್ಚಲಿದೆ. ಈ ಸಂಬಂಧ ಆತಂಕ ಬೇಡ ಎಂದು ಅವರು ಹೇಳಿದ್ದಾರೆ.

    300x250 AD

    ರಸ್ತೆ ವಿನಾಯಿತಿ ನೀಡುವಂತೆ ನಾವು ಕೇವಲ ರಾಜ್ಯಗಳಿಗಷ್ಟೇ ತಿಳಿಸುತ್ತಿಲ್ಲ. ಬದಲಾಗಿ ಈ ಸಂಬಂಧ ನಿಯಮಾವಳಿಗಳಲ್ಲಿಯೂ ಅಗತ್ಯ ಮಾರ್ಪಾಡು ಮಾಡುತ್ತೇವೆ. ವೈಯಕ್ತಿಕ ವಾಹನಗಳಿಗೆ 25% ಮತ್ತು ವಾಣಿಜ್ಯ ಉದ್ದೇಶದ ವಾಹನಗಳಿಗೆ 15% ಗಳಷ್ಟು ವಿನಾಯಿತಿ ನೀಡುವಂತೆ ಕಾನೂನು ರೂಪಿಸಲಾಗುವುದು ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top