ಶಿರಸಿ: ನಗರದ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆ.21 ಶನಿವಾರ ಮುಂಜಾನೆ 10 ಘಂಟೆಗೆ `ಉದ್ಯೋಗ ನೇರ ನೇಮಕಾತಿ’ ಪ್ರಕ್ರಿಯೆ ನಡೆಯಲಿದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಪಾಲ್ಗೊಳ್ಳಲಿದ್ದು ಬಿಎ. ಬಿಕಾಂ, ಬಿಎಸ್ಸಿ ಸೇರಿದಂತೆ ಯಾವುದೇ ಪದವೀಧರರು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. 26 ವರ್ಷದ ಒಳಗಿನ ಪುರುಷ ಮತ್ತು ಮಹಿಳಾ ಪದವೀಧರರು ಅರ್ಹರಾಗಿರುತ್ತಾರೆ ಎಂದು ಪ್ರಾಚಾರ್ಯ ಡಾ. ಟಿ.ಎಸ್.ಹಳೆಮನೆ ತಿಳಿಸಿದ್ದಾರೆ. ಅಂದು ಮುಂಜಾನೆ ಹತ್ತು ಘಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಉದ್ಘಾಟಕರಾಗಿ ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಂಪನಿಯ ಮುಖ್ಯಸ್ಥ ಗೋಪಾಲ ಗಡಗಿ ಕಾಲೇಜು ಸಮಿತಿಯ ಚೇರಮನ್ ವರೀಂದ್ರ ಕಾಮತ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.