ಶಿರಸಿ: ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಆಯೋಜನೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವ' ಕಾರ್ಯಕ್ರಮದ ನಿಮಿತ್ತ
ಗುರವಂದನಾ ಸಂಗೀತೋತ್ಸವ’ ಹಾಗೂ ಅಂತಿಮ ಬಿ.ಎ. ಸಂಗೀತ ವಿಭಾಗದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಸಂಗೀತ ವಿಭಾಗದ ವಿದ್ಯಾರ್ಥಿನಿ ಕು.ಧನ್ಯಾ ಕೊಡಗೀಪಾಲ್ ಗಾಯನ ನಡೆಯಿತು. ರಾಗ ಬೈರವ್ ವಿಲಂಬಿತ್ ಹಾಗೂ ದೃತ್‍ಲಯದಲ್ಲಿ ಸುಶ್ರಾವ್ಯವಾಗಿ ಹಾಡಿದ ಧನ್ಯಾ ಭರವಸೆಯ ಕಲಾವಿದೆ ಎಂಬುದನ್ನು ಸಾಬೀತು ಮಾಡಿ, ಗುರುಜನರ ಆಶೀರ್ವಾದ ಪಡೆದಳು. ಇವರಿಗೆ ಭರವಸೆಯ ಯುವ ಹಾರ್ಮೋನಿಯಂ ವಾದಕ ಅಜಯ ಹೆಗಡೆ ಸಂವಾದಿನಿಯಲ್ಲಿದ್ದರೆ, ಯುವ ತಬಲಾ ವಾದಕ ವಿವೇಕ್ ಹೆಗಡೆ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ರಾಷ್ಟ್ರೀಯ ಮಾನ್ಯತೆಯ ಹಿರಿಯ ಕಲಾವಿದ ಪ್ರೋ.ಆರ್..ವಿ ಹೆಗಡೆ, ಹಳ್ಳದಕೈ ಹಾಗೂ ರಾಜು ಹೆಗ್ಗಾರ್ ಅವರ ಸಿತಾರ್ ಹಾಗೂ ಜಲತರಂಗ ಜುಗುಲಬಂಧಿ' ಕಾರ್ಯಕ್ರಮ ಸಂಗೀತಾಭಿಮಾನಿಗಳನ್ನು ಮಂತ್ರ ಮುಗ್ದರನ್ನಾಗಿಸಿತು. ರಾಗ ನಟ್‍ಬೈರವ್‍ದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿ ಬೈರವಿ ಧುನ್‍ನೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು. ಅನಂತ ವಾಜಗಾರ ತಬಲಾ ಸಾಥ್ ನೀಡಿದರು. ಡಾ|| ಶೈಲಜಾ ಮಂಗಳೂರ್
ಗುರುಭಜನ್’, `ಮನಭಾವನ ಮೇರೊ’ ಸುಶ್ರಾವ್ಯವಾಗಿ ಹಾಡಿದರು.
ಈ ಸಂದರ್ಭದಲ್ಲಿ ಖ್ಯಾತ ತಬಲಾ ವಾದಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಂಜೀವ ಪೋತದಾರ್, ಖ್ಯಾತ ಸಿತಾರ್ ವಾದಕ, ಪ್ರೊ. ಆರ್.ವಿ. ಹೆಗಡೆ ಹಳ್ಳದಕೈ, ಹಾಗೂ ನಿವೃತ್ತ ಸಂಗೀತ ಪ್ರಾಧ್ಯಾಪಕಿ ಡಾ|| ಶೈಲಜಾ ಮಂಗಳೂರು ಹಾಗೂ ಖ್ಯಾತ ಜಲತರಂಗವಾದಕ ಡಾ|| ರಾಜು ಹೆಗ್ಗಾರ ಅವರನ್ನು ಸತ್ಕರಿಸಲಾಯಿತು. ಅಭಿಜಾತ ಕಲಾವಿದೆ ಭರವಸೆಯ ಸಂಗೀತ ವಿಭಾಗದ ವಿದ್ಯಾರ್ಥಿನಿ ಕು.ಧನ್ಯಾ ಕೊಡಗೀಪಾಲ್ ಇವರನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಇ.ಎಸ್. ಗೌರ್ನಿಂಗ್ ಕೌನ್ಸಿಲ್‍ನ ಸದಸ್ಯ ಲೋಕೇಶ ಹೆಗಡೆ ವಹಿಸಿದ್ದರು. ಪ್ರಾಚಾರ್ಯೆ ಡಾ.ಕೋಮಲಾ ಭಟ್ಟ ಹಾಗೂ ರಾಜೇಂದ್ರ ಹೆಗಡೆ ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ಭಟ್ಟ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ಸಂಗೀತ ವಿಭಾಗದ ಪ್ರಾಧ್ಯಾಪಕರಾದ ಅನಂತ ಹೆಗಡೆ, ಗೋಪಾಲಕೃಷ್ಣ ಹೆಗಡೆ ಹಾಗೂ ಇತರ ಸಂಗೀತಾಸಕ್ತ ಉಪನ್ಯಾಸಕರು, ಶ್ರೋತೃಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿ.ಎ ಅಂತಿಮ ತರಗತಿಯ ಸಂಗೀತ ವಿಭಾಗದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಬೀಳ್ಕೊಡಲಾಯಿತು. ಪಲ್ಲವಿ ಜೈನ್ ಕಾರ್ಯಕ್ರಮ ನಿರ್ವಹಿಸಿದರು.