ಹೊನ್ನಾವರ: ಕಾಲು ಜಾರಿ ಬಿದ್ದು ಸಮುದ್ರ ಪಾಲಾಗಿದ್ದ ತಾಲೂಕಿನ ಕಲ್ಲಬ್ಬೆ ಕಂದವಳ್ಳಿ ನಿವಾಸಿ ಗೋಪಾಲ ಗೌಡ(32) ಎಂಬಾತನ ಶವ ಮೂರು ದಿನದ ನಂತರ ಕುಮಟಾ ಹೆಡ್ ಬಂದರ್ ಬೀಚ್ ಬಳಿ ಪತ್ತೆಯಾಗಿದೆ.
ಮೂರು ದಿನದ ಹಿಂದೆ ಹಳದೀಪುರದ ಬಸವರಾಜ ದುರ್ಗದ ಸಮೀಪ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ಒಳಗಿಂದ ನೀರಲ್ಲಿ ಬಿದ್ದು ನಾಪತ್ತೆಯಾಗಿದ್ದ. ಈ ಬಗ್ಗೆ ಹೊನ್ನಾವರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಸತತ ಎರಡು ಮೂರು ದಿನಗಳ ಹುಡುಕಾಟದ ನಂತರ ಕುಮಟಾದ ಹೆಡ್ ಬಂದರ್ ಸಮೀಪ ಇಂದು ಶವ ಪತ್ತೆಯಾಗಿದ್ದು, ಕುಟುಂಬಸ್ಥರ ರೋಧಿಸುತ್ತಿದ್ದಾರೆ.