ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಕ್ಯಾಪ್ಸಿಕಂ 1, ಹಸಿರು ಮೆಣಸು 1, ಟೊಮೇಟೊ 500 ಗ್ರಾಂ, ಅಡುಗೆ ಎಣ್ಣೆ 3-4, ಕಾಳುಮೆಣಸಿನ ಪುಡಿ ಸ್ವಲ್ಪ, ರುಚಿಗೆ ಉಪ್ಪು, ಬೆಣ್ಣೆ 1 ಟೀ.ಚ, ಹೆಚ್ಚಿದ ಈರುಳ್ಳಿ 1, ಬೆಳ್ಳುಳ್ಳಿ, ಆಲೂಗಡ್ಡೆ 1, ಹಾಲಿನ ಕೆನೆ (ಕ್ರೀಮ್, ಮಲಾಯಿ)1/2 ಕಪ್.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ 4-5 ಗ್ಲಾಸ್ ನೀರು ಹಾಕಿ ಬಿಸಿ ಮಾಡಿ. ಅದಕ್ಕೆ ಆಲುಗಡ್ಡೆ, ಕ್ಯಾಪ್ಸಿಕಂ, ಹಸಿರು ಮೆಣಸು ಮತ್ತು ಟೊಮೇಟೊ ಹಾಕಿ ಬೇಯಿಸಿ ಇಳಿಸಿ. ಆರಿದ ನಂತರ ರುಬ್ಬಿ ಇಡಿ. ಈಗ ಒಂದು ಪಾತ್ರೆ ಬಿಸಿಮಾಡಿ ಬೆಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಅರೆದ ಬೆಳ್ಳುಳ್ಳಿ ಹಾಕಿ ಹುರಿದು, ಕಾಳು ಮೆಣಸಿನ ಪುಡಿ, ರುಚಿಗೆ ಉಪ್ಪು ರುಬ್ಬಿದ ಟೊಮೇಟೊ ಮಿಶ್ರಣ ಹಾಕಿ ಕುದಿಸಿ ಇಳಿಸಿ. ರುಚಿಗೆ 1/2 ಟಿ.ಚ ಸಕ್ಕರೆ ಹಾಕಿ. ಈಗ ಒಂದು ಪಾತ್ರೆಗೆ ಟೊಮೇಟೊ, ಕ್ಯಾಪ್ಸಿಕಂ ಸೂಪ್ ಹಾಕಿ ಮೇಲಿಂದ ಕ್ರೀಮ್ ಹಾಕಿ ಅಲಂಕಾರ ಮಾಡಿದರೆ ಟೇಸ್ಟಿಯಾದ ಸೂಪ್ ಸವಿಯಲು ರೆಡಿ.