• Slide
    Slide
    Slide
    previous arrow
    next arrow
  • ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‍ಗೆ 4 ವರ್ಷದ ಬಾಲಕ ಸಂಪ್ರೀತ ಆಯ್ಕೆ

    300x250 AD


    ಕುಮಟಾ: ಆತ 4 ವರ್ಷ 5 ತಿಂಗಳ ಬಾಲಕ. ಆದರೆ ಸಾಧನೆ ಮಾಡಿದ್ದು ಮಾತ್ರ ಅದ್ಭುತ. ಚಿಕ್ಕ ವಯಸ್ಸಿನಲ್ಲಿ ಆಟ ಆಡಬೇಕಾಗಿದ್ದ ಈ ಬಾಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಸಾಧನೆ ಮಾಡುವ ಮೂಲಕ ಹಲವು ಮಕ್ಕಳಿಗೆ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾನೆ.

    ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಆರ್.ಪಿ.ಎಸ್.ಎಚ್ ಬಾಲ ಮಂದಿರದಲ್ಲಿ ಎಲ್.ಕೆ.ಜಿ ಓದುತ್ತಿರುವ ತಾಲೂಕಿನ ಹೊಸ ಹೆರವಟ್ಟಾದ ಸಂತೋಷ ಕೇಶವ ನಾಯ್ಕ ಹಾಗೂ ಅನಿತಾ ಎಸ್. ನಾಯ್ಕ ದಂಪತಿಯ ಪುತ್ರನಾದ ಸಂಪ್ರೀತ ನಾಯ್ಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‍ಗೆ ಆಯ್ಕೆಯಾಗುವ ಮೂಲಕ ಜಿಲ್ಲೆ ಹಾಗೂ ತಾಲೂಕಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ.

    195 ರಾಷ್ಟಗಳ ಧ್ವಜಗಳನ್ನು ಗುರುತಿಸುವುದು ಮತ್ತು ನೋಡದೇ ಹೇಳುವುದು. 118 ಆವರ್ತಕ ಕೋಷ್ಟಕದ ಹೆಸರು, ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಗ್ರಹಗಳು, ಋತುಗಳು, ಮಾಸಗಳು, 20 ಕವಿಗಳ ಬಿರುದು ಹಾಗೂ ಭಾರತದ ರಾಷ್ಟ್ರಪತಿಗಳ ಹೆಸರನ್ನು ಈತ ಹೇಳುತ್ತಾನೆ. 1 ರಿಂದ 100 ಅಂಕೆಗಳವರೆಗೆ ಬರೆಯುವುದು, ರಾಷ್ಟ್ರಗೀತೆ, ನಾಡಗೀತೆ, ಎ ದಿಂದ ಜೆಡ್ ವರೆಗಿನ ಸ್ಪೆಲ್ಲಿಂಗ್, 1 ರಿಂದ 5 ರವರೆಗಿನ ಟೇಬಲ್ಸ್ ಸೇರಿದಂತೆ ರಾಷ್ಟ್ರೀಯ ಚಿಹ್ನೆಗಳ ಹೆಸರನ್ನು ಹೇಳುವ ಜ್ಞಾನವನ್ನೂ ಈ ಬಾಲಕ ಹೊಂದಿದ್ದಾನೆ.

    300x250 AD

    118 ಆವರ್ತಕ ಕೋಷ್ಟಕದ ಹೆಸರನ್ನು 55 ಸೆಕೆಂಡ್‍ಗಳಲ್ಲಿ ಹೇಳಿರುವ ಈತನ ಚಾಣಾಕ್ಷತನಕ್ಕೆ ಹಾಗೂ ಜ್ಞಾನ ಶಕ್ತಿಯನ್ನು ಪರಿಗಣಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೇಕಾರ್ಡ್ ದಾಖಲೆಯಲ್ಲಿ ಈತನ ಹೆಸರು ಸೇರ್ಪಡೆಗೊಂಡಿದೆ. ಈ ಪುಟ್ಟ ಬಾಲಕನ ಸಾಧನೆಗೆ ಜಿಲ್ಲೆ ಹಾಗೂ ತಾಲೂಕಿನ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದು, ಪೆÇೀಷಕರೂ ಸಹ ಸಂತಸಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top