ಯಲ್ಲಾಪುರ: ಯಲ್ಲಾಪುರದ ಭಿಕ್ಕು ಗುಡಿಗಾರ ಕಲಾಕೇಂದ್ರಕ್ಕೆ ಸಚಿವ ಆನಂದ ಸಿಂಗ್ ಮಂಗಳವಾರ ಭೇಟಿ ನೀಡಿದರು.
ರಾಜನಳ್ಳಿಯ ವಾಲ್ಮಿಕೀ ಸಂಸ್ಥಾನಕ್ಕೆ ರಾಮಾಯಣದ ಕಥೆಯನ್ನು ಸಾರುವ ಕೆತ್ತನೆಯುಳ್ಳ ಬೃಹತ್ ರಥದ ಕೆತ್ತನೆಯ ಕಾರ್ಯ ವೀಕ್ಷಣೆಗೆ ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭೇಟಿ ನೀಡಿದ್ದಾರೆ.
ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಮಠದ ಧರ್ಮದರ್ಶಿ ಜಂಬಯ್ಯ ಅವರೊಂದಿಗೆ ಆಗಮಿಸಿದ ಆನಂದ ಸಿಂಗ್ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.