• Slide
    Slide
    Slide
    previous arrow
    next arrow
  • ವೈವಿಧ್ಯಮಯ ಸಂಗೀತ ಸುರಿಮಳೆಯೊಂದಿಗೆ ಯಶಸ್ವಿಯಾದ ಜನನಿ ಸಂಗೀತೋತ್ಸವ

    300x250 AD

    ಶಿರಸಿ : ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿದ ಸೋಮಸಾಗರದ ಶ್ರೀ ಸೋಮೇಶ್ವರ ದೇವಾಲಯದ ಹೊರಗಿನ ಸಭಾಂಗಣದಲ್ಲಿ ಜನನಿ ಸಂಗೀತ ಉತ್ಸವವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಜನನಿ ಸಂಸ್ಥೆಯು ಉತ್ಸವವನ್ನು ಎರಡು ದಿನಗಳ ಕಾಲ ಕೊವಿಡ್ ಪ್ರಯುಕ್ತ ಯಾವುದೇ ಸಾರ್ವಜನಿಕರಿಗೆ ಪ್ರವೇಶ ಇಲ್ಲದೆ ನಿಯಮವನ್ನು ಪಾಲಿಸಿ ಅಂತರ್ಜಾಲ ಮುಖಾಂತರ ಆಯೋಜಿಸಿತ್ತು. ಇದೊಂದು ದಾಖಲೀಕರಣದ ಕಾರ್ಯಕ್ರಮವಾಗಿ ವೈವಿದ್ಯಮಯ ಸಂಗೀತದೊಂದಿಗೆ ಸಂಗೀತ ಸುರಿಮಳೆಯೇ ನಡೆಯಿತು.

    ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಸೋಮೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಧರ್ಮದರ್ಶಿ ಹಾಗೂ ಯಡಳ್ಳಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಜುನಾಥ ಹೆಗಡೆ ಕಬ್ನಳ್ಳಿ ಮಾತನಾಡಿ ಸಂಗೀತಾಭ್ಯಾಸ ಕೇವಲ ಒಂದೆರಡು ವರ್ಷಕ್ಕೆ ಬರುವದಲ್ಲ. ನಿರಂತರ ಸಾಧನೆ ಮಾಡಿದಾಗ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಹಾಗೂ ಏಕಾಗ್ರತೆ ಮತ್ತು ಅನೇಕ ಕಷ್ಟಕರ ಸಂಗತಿ ಎದುರಿಸಲು ಸಾಧಯವಾಗುತ್ತದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಸೋಮೇಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಹೇಂದ್ರ ಹೆಗಡೆ ಮುಳಖಂಡ ಮಾತನಾಡಿ ಪವಿತ್ರ ಕ್ಷೇತ್ರದಲ್ಲಿ ಸಂಗೀತ ಸಮಾರಾಧನೆ ನಡೆಯುವುದು ನಿಜಕ್ಕೂ ಸತ್ತಮುತ್ತಲ ವಾತಾವಣಕ್ಕೆ ಒಳ್ಳೆಯ ಅನುಕೂಲವಾಗಿದೆ ಎಂದರು.
    ಜನನಿ ಮ್ಯೂಸಿಕ ಸಂಸ್ಥೆಯ ಮುಖ್ಯಸ್ಥ ದಿನೇಶ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರೆ ರೇಖಾ ದಿನೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.
    ತದನಂತರದಲ್ಲಿ ಆರಂಭಗೊಂಡ ಜನನಿ ಸಂಗೀ ಉತ್ಸವದಲ್ಲಿ ಆರಂಭಿಕವಾಗಿ ಸಂಸ್ಥೆಯ ಯುವ ಪ್ರತಿಭೆಗಳಾದ ಅಮೃತಾ ಮ. ಹೆಗಡೆ ಮತ್ತು ವಿಂದ್ಯಾ ವಿ. ಹೆಗಡೆ ಸುಶ್ರಾವ್ಯವಾಗಿ ಹಾಡಿ ಸೈ ಎನಿಸಿಕೊಂಡರು. ನಂತರದಲ್ಲಿ ಸಂಪ್ರೀತಾ ಹೆಗಡೆ ಮತ್ತು ಪೃಥ್ವಿ ಹಿತ್ಲಳ್ಳಿ ತಮ್ಮ ಪ್ರತಿಭಾ ಗಾಯನ ನಡೆಸಿಕೊಟ್ಟರು. ಈ ಸಂದರ್ಭ ತಬಲಾದಲ್ಲಿ ಕಿರಣ ಕಾನಗೋಡ ಹಾಗೂ ಹಾರ್ಮೋನಿಯಂ ನಲ್ಲಿ ಸತೀಶ ಭಟ್ಟ ಹೆಗ್ಗಾರ ಸಾಥ್ ನೀಡಿದರು.
    ಮುಂದುವರಿದ ಸಂಗೀತ ಉತ್ಸವದಲ್ಲಿ ಸ್ಪಂದನಾ ಭಟ್ಟ ಮತ್ತು ಭುವನಾ ಹೆಗಡೆ ಹಾಗೂ ಅನ್ನಪೂರ್ಣೇಶ್ವರಿ ಬೆಲ್ಲದ ಮತ್ತು ಪ್ರಿಯಾಂಕಾ ಹೆಗಡೆ ತಮ್ಮ ಸುಮಧುರ ಕಂಠದಲ್ಲಿ ಹಾಡಿ ಕಾರ್ಯಕ್ರಮಕ್ಕೆ ಮೆರಗು ನೀಡದರು. ಈ ಸಂದರ್ಭದಲ್ಲಿ ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾಗು ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಾಥ್ ನೀಡಿದರು.

    300x250 AD

    ನಂತರದಲ್ಲಿ ನಡೆದ ಸಂಸ್ಥೆಯ ಹಿರಿಯ ವಿದ್ಯಾಥಿಗಳ ವಿಭಾಗದಲ್ಲಿ ಶಿವಮೊಗ್ಗ ದಂತ ವೈದಯಕೀಯ ಶಿಕ್ಷಣದ ತೃತೀಯ ವರ್ಷದ ವಿದ್ಯಾರ್ಥಿನಿ ಅಂಜನಾ ಹೆಗಡೆ ಕಾನಮುಸ್ಕಿ ಸೊಗಸಾಗಿ ಹಾಗಿ ಒಂದು ಭಕ್ತಿಗೀತೆಯೊಂದಿಗೆ ಜನಮನ ಸೆಳೆದಳು. ಇದೇ ಸಂದರ್ಭದಲ್ಲಿ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ್ಳ ಮತ್ತು ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಹಾಗೂ ತಬಲಾದಲ್ಲಿ ಅಮೃತಾ, ವಿಂದ್ಯಾ ಸಹಕರಿಸಿದರು.
    ನಂತರದಲ್ಲಿ ಶಿರಸಿಯ ಮಧುಶ್ರೀ ಶೇಟ್ ತಮ್ಮ ತಂದೆ ರಾಜು ಶೇಟ್ ರವರು ರಚಿಸಿದ ಸಾಹಿತ್ಯದ ಹಾಡನ್ನು ಸೊಗಸಾಗಿ ಹಾಡಿದರು. ಇದೇ ಸಂದರ್ಭದಲ್ಲಿ ತಬಲದಲ್ಲಿ ಕಿರಣ ಕಾನಗೋಡ ಹಾಗೂ ಹಾರ್ಮೋನಿಯಂ ನಲ್ಲಿ ಪ್ರಕಾಶ ಹೆಗಡೆ ಯಡಳ್ಳಿ ಸಹಕರಿಸಿದರು.
    ಜನನಿ ಸಂಸ್ಥೆಯ ವಿದ್ಯಾರ್ಥಿನಿ ಮಾನಸಾ ಹೆಗಡೆ ಸುಶ್ರಾವ್ಯವಾಗಿ ಹಾಡಿದರೆ ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾಗೂ ಹಾಮೋನಿಯಂ ನಲ್ಲಿ ಸತೀಶ ಹೆಗ್ಗಾರ ಸಾಥ್ ನೀಡಿದರು.

    ಮೊದಲ ದಿನದ ಕೊನೆಯ ಕಾರ್ಯಕ್ರಮವಾಗಿ ಇದೇ ಪ್ರಥಮ ಬಾರಿಗೆ ಹಾರ್ಮೋನಿಯಂನಲ್ಲಿ ತ್ರಿಗಲ್ ಬಂಧಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅತ್ಯಂತ ಸೊಗಸಾಗಿ ನಡೆಯಿತು. ಹಾರ್ಮೋನಿಯಂ ತ್ರಿಗಲ್ ಬಂಧಿಯಲ್ಲಿ ಉ. ಪ್ರಕಾಶ ಹೆಗಡೆ ಯಡಳ್ಳಿ, ಸತೀಶ ಭಟ್ಟ ಹೆಗ್ಗಾರ್ ಹಾಗೂ ಭರತ ಹೆಗಡೆ ಹೆಬ್ಬಲಸು ಅತಿ ಸುಂದರವಾಗಿ ನುಡಿಸಿದರೆ ಅಷ್ಟೇ ಸಮರ್ಥವಾಗಿ ತಬಲಾದಲ್ಲಿ ಜುಗಲ್‍ಬಂಧಿಯಾಗಿ ಗುರುರಾಜ ಹೆಗಡೆ ಆಡುಕಳ, ಮತ್ತು ಗಣೇಶ ಗುಂಡ್ಕಲ್ ಸಾಥ್ ನೀಡಿದರು. ತಬಲಾದಲ್ಲಿ ಅಮಿತ್ ಸಹಕರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top