ಶಿರಸಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದ ವಾಣಿಜ್ಯ ಮಹಾವಿದ್ಯಾಲಯ ಶಿರಸಿ ಇದರ ಆಶ್ರಯದಲ್ಲಿ ಸಾಹಿತ್ಯ ಮತ್ತು ಚರ್ಚಾ ವಿಭಾಗದಿಂದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಚರ್ಚಾಕೂಟದ ಸಂಚಾಲಕರಾದ ಸವಿತಾ ರವೀಂದ್ರನಾಥ ಮತ್ತು ಆನಂದರಾವ್ ಇವರ ಮಾರ್ಗದರ್ಶನದಲ್ಲಿ ಸ್ಪರ್ಧೆ ನಡೆಸಿದರು. ಚರ್ಚಾ ಸ್ಪರ್ಧೆಯಲ್ಲಿ ಭಾರತ ಸ್ವಾತಂತ್ರ್ಯ ನಂತರ ನಾವು ನಮ್ಮ ನಿರೀಕ್ಷೆಗಳನ್ನು ಈಡೇರಿಸಲು ಸಫಲರಾಗಿದ್ದೇವೆ' ಎನ್ನುವ ವಿಷಯದ ಕುರಿತು ಮಾತನಾಡಿದ ದೀಪ್ತಿ ಭಟ್ ಪ್ರಥಮ ಬಹುಮಾನ ಪಡೆದಿದ್ದಾರೆ. ಹಾಗೆ ಗಜಾನನ ಹೆಗಡೆ ದ್ವಿತೀಯ ಮತ್ತು ಮನೋಜ ಭಟ್ ಇವರು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಗಳಾದ ಸೌಮ್ಯ ಹೆಗಡೆ ಪ್ರಥಮ ದೀಪಿಕಾ ಹೆಗಡೆ ದ್ವಿತೀಯ ಮತ್ತು ಅಮೃತಾ ಎಲ್ಲನಕರ್ ಇವರು ತೃತೀಯ ಬಹುಮಾನ ಪಡೆದಿರುತ್ತಾರೆ. ಅದೇ ರೀತಿ ಚರ್ಚಾ ವಿಭಾಗದಿಂದ
75 ವರ್ಷಗಳ ಸ್ವಾತಂತ್ರ್ಯ ನಂತರದ ಭಾರತದ ಸವಾಲುಗಳು’ ಎಂಬ ವಿಷಯದ ಕುರಿತು ಏರ್ಪಡಿಸಲ್ಪಟ್ಟ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ರಮ್ಯಾ ಹೆಗಡೆ ಇವರು ಪ್ರಥಮ ಮತ್ತು ವಿದ್ಯಾರ್ಥಿನಿಯರಾದ ಅನಿತಾ ಹೆಗಡೆ ದ್ವಿತೀಯ, ಸಪ್ತಮಿ ಶೇಟ್ ಇವರು ತೃತೀಯ ಬಹುಮಾನ ಪಡೆದುಕೊಂಡರು. ಧ್ವಜಾರೋಹಣದ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಟಿ.ಎಸ್.ಹಳೆಮನೆ ಬಹುಮಾನವನ್ನು ವಿತರಿಸಿ ವಿಜೇತರನ್ನು ಅಭಿನಂದಿಸಿದರು.