ಶಿರಸಿ: ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ ಜೋಶಿ ನೇತೃತ್ವದಲ್ಲಿ ಆ.20 ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ 77 ನೇ ಹುಟ್ಟು ಹಬ್ಬದ ಅಂಗವಾಗಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ನಗರದ ರೋಟರಿ ಆಸ್ಪತ್ರೆ ಪಕ್ಕದ ರೋಟರಿ ಸೆಂಟರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಕೂಡಲೇ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು, 9591974977, 8277741391, 9448690035 ಈ ಸಂಖ್ಯೆಗೆ ಕರೆ ಮಾಡಿ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ನಿರ್ಣಾಯಕರಾಗಿ ಖ್ಯಾತ ಸುಗಮಸಂಗೀತ ಗಾಯಕ ರವಿ ಮೂರೂರು, ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಸಂಗೀತ ಶಿಕ್ಷಕ ಗೋಪಾಲಕೃಷ್ಣ ಹೆಗಡೆ ತಾರಗೋಡು ಹಾಗೂ ಯುವಗಾಯಕಿ ವಸುಧಾ ಶಾಸ್ತ್ರಿ ಸೋಂದಾ ಪಾಲ್ಗೊಳ್ಳಲಿದ್ದಾರೆ.
ಸ್ಪರ್ಧಾ ನಿಯಮಗಳು: ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು 18 ರಿಂದ 30 ವರ್ಷದವರಾಗಿದ್ದು, ಗುರುತಿನ ಚೀಟಿ ಕಡ್ಡಾಯ ತರಬೇಕು. ದೇಶಭಕ್ತಿ ಗೀತೆಗಳನ್ನು ಮಾತ್ರ ಹಾಡುಬೇಕು. ಗೀತೆಯ ಅವಧಿ – 4 ರಿಂದ 5 ನಿಮಿಷಗಳು.