ಶಿರಸಿ: ತಾಲೂಕಿನಲ್ಲಿ ಆ.16 ಸೋಮವಾರದಂದು 8 ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಅವುಗಳಲ್ಲಿ ಶಾಂತಿನಗರ 3, ಟಿ ಎಸ್ ಎಸ್ ರಸ್ತೆ 1, ಹಂಚಿನಕೇರಿ 1, ಸುಗಾವಿ 1, ವೀರಭದ್ರ ಗಲ್ಲಿ 1, ಹುಬ್ಬಳ್ಳಿ ರಸ್ತೆಯಲ್ಲಿ 1 ಕೇಸ್ ದಾಖಲಾಗಿದೆ.
ಕೋವಿಡ್ ಕೇರ್ ಸೆಂಟರ್ ನಲ್ಲಿ 6 ಮಂದಿ, ರೋಟರಿ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟೂ 39 ಮಂದಿ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟೂ 950 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, 129 ರ್ಯಾಪಿಡ್ ಹಾಗೂ 821 RTPCR ಟೆಸ್ಟ್ ನಡೆಸಲಾಗಿದೆ.
ಸೋಮವಾರ 5 ಮಂದಿ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಸ್ಕ್ಯಾನ್ ಸೆಂಟರ್ ನಿಂದ 1, ಸರ್ಕಾರಿ ಆಸ್ಪತ್ರೆಯಿಂದ 2, ಮಹಾಲಕ್ಷ್ಮಿ ಮೆಮೊರಿಯಲ್ ನಿಂದ 2 ಮಂದಿ ಸೋಂಕಿನಿಂದ ಬಿಡುಗಡೆಯಾಗಿದ್ದಾರೆ.
ತಾಲೂಕಿನಲ್ಲಿ ಇಲ್ಲಿಯವರೆಗೆ 7,074 ಮಂದಿಗೆ ಸೋಂಕು ತಗುಲಿದ್ದು, ಅವುಗಳಲ್ಲಿ 6,955 ಮಂದಿ ಗುಣಮುಖರಾಗಿದ್ದಾರೆ ಹಾಗೂ ರಿಕವರಿ ರೇಟ್ ಶೇಕಡಾ 98 ರಷ್ಟಿದೆ.