• Slide
  Slide
  Slide
  previous arrow
  next arrow
 • ಜಿಲ್ಲೆಯಲ್ಲಿ 53 ಪಾಸಿಟಿವ್; 2 ಸಾವು, 53 ಮಂದಿ ಗುಣಮುಖ

  300x250 AD

  ಜಿಲ್ಲೆಯಲ್ಲಿ ಆ.16 ಸೋಮವಾರದಂದು 53 ಕರೋನಾ ಪಾಸಿಟಿವ್ ಕೇಸ್ ದಾಖಲಾಗಿದ್ದು 2 ಜನ ಮೃತಪಟ್ಟಿದ್ದಾರೆ.

  ಅವುಗಳಲ್ಲಿ ಕಾರವಾರ5, ಅಂಕೋಲಾ 3, ಕುಮಟಾ 14, ಹೊನ್ನಾವರ 9, ಭಟ್ಕಳ 10, ಶಿರಸಿ 8, ಸಿದ್ದಾಪುರ 2 ಹಾಗೂ ಯಲ್ಲಾಪುರದಲ್ಲಿ 2 ಕರೋನಾ ಪಾಸಿಟಿವ್ ದಾಖಲಾಗಿದೆ. ಮತ್ತು ಅಂಕೋಲಾದಲ್ಲಿ ಇಬ್ಬರು ಕರೋನಾ‌ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟೂ 454 ಸಕ್ರಿಯ ಪ್ರಕರಣಗಳಿದ್ದು 111 ಮಂದಿ ಆಸ್ಪತ್ರೆಯಲ್ಲಿ ಹಾಗೂ 343 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಇನ್ನು ಜಿಲ್ಲೆಯಾದ್ಯಂತ 53 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಕಾರವಾರದಲ್ಲಿ 6, ಅಂಕೋಲಾದಲ್ಲಿ 9, ಕುಮಟಾ 8, ಹೊನ್ನಾವರ 4, ಭಟ್ಕಳ 3, ಶಿರಸಿ 5, ಸಿದ್ದಾಪುರ 3, ಯಲ್ಲಾಪುರ 12, ಮುಂಡಗೋಡ 1 ಹಾಗೂ ಹಳಿಯಾಳದಲ್ಲಿ 2 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

  300x250 AD

  ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟೂ 54,110 ಮಂದಿಗೆ ಕರೋನಾ ಸೋಂಕು ತಗುಲಿದ್ದು ಅದರಲ್ಲಿ 52, 906 ಮಂದಿ ಗುಣಮುಖರಾಗಿದ್ದಾರೆ ಮತ್ತು 750 ಮಂದಿ ಸಾವನ್ನಪ್ಪಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top