ಶಿರಸಿ: ತಾಲೂಕಿನ ಮುಂಡಗನಮನೆ ಸೊಸೈಟಿಯಲ್ಲಿ ಇತ್ತೀಚೆಗೆ ಕೊವಿಶೀಲ್ಡ್ ವ್ಯಾಕ್ಸಿನ್ 2ನೇ ಡೋಸನ್ನು ಆರೋಗ್ಯ ಇಲಾಖೆಯವರು ನೀಡಿದರು.
ಶಿರಸಿಯಿಂದ 36 ಕಿಮಿ. ದೂರದ ಮತ್ತಿಘಟ್ಟ ಅತೀ ಹಿಂದುಳಿದ ಪ್ರದೇಶದಲ್ಲಿ ಜನರು ಇದ್ದಲ್ಲಿಯೇ ಲಸಿಕೆ ನೀಡಿದ್ದಕ್ಕೆ ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಶ್ಲಾಘಿಸಿದರು. ಅಲ್ಲದೇ ಇಲ್ಲಿಯ ಗುಡ್ಡಗಾಡು ಪ್ರದೇಶದ ಜನರು ಈ ಸಾರಿ ನೆರೆಯ ಪರಿಸ್ಥಿತಿಯಿಂದ ಕಷ್ಟವನ್ನು ಎದುರಿಸುತ್ತಿದ್ದಾರೆ. ಅಂತವರಿಗೆ 20 ಕಿಮಿ. ದೂರದ ಹೆಗಡೆಕಟ್ಟಾ ಅಥವಾ ಶಿರಸಿಗೆ ವ್ಯಾಕ್ಸಿನ್‍ಗಾಗಿ ಓಡಾಡುವ ಬದಲು ಮೊದಲನೇ ಡೋಸನ್ನು ಇಲ್ಲಿಯೇ ನೀಡಿದರೆ ಈಗಾಗಲೇ ನೀಡಿದ ವ್ಯಾಕ್ಸಿನ್ ನೀಡಿಕೆ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.