ಶಿರಸಿ: ಸೂರ್ಯನಾರಾಯಣ ಪ್ರೌಢ ಶಾಲೆ ಬಿಸಲಕೊಪ್ಪದಲ್ಲಿ ಸಂಭ್ರಮದಿಂದ ಅಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ಸ್ವಾತಂತ್ರ್ಯೋತ್ಸವ ಜರುಗಿತು.
ಸಂಸ್ಥೆಯ ಉಪಾಧ್ಯಕ್ಷ ಶ್ರೀಧರ ನಾಯಕ ಧ್ವಜಾರೋಹಣ ನೆರವೇರಿಸಿ ಸ್ವಾಮಿ ವಿವೇಕಾನಂದರ ಜೀವನದ ಉದಾಹರಣೆ ನೀಡುತ್ತ ಸಂಸ್ಕೃತಿ, ಸಂಸ್ಕಾರಯುತ ಶಿಕ್ಷಣ ನಮ್ಮದಾಗ ಬೇಕು. ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯಾಗಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ನಮ್ಮದಾಗಿ ಶೈಕ್ಷಣಿಕ ಕ್ರಾಂತಿ ಮಾಡಿ ದೇಶಕ್ಕೆ ಕೊಡುಗೆ ನೀಡಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ಹೆಗಡೆ ಬಿಸಲಕೊಪ್ಪ ಕಲಿತ ಶಾಲೆ ಬದುಕುವ ದೇಶದ ನೆನಪು ಸದಾ ಇಟ್ಟು ಸ್ವಾತಂತ್ರ್ಯ ದ ಮಹತ್ವ ಅರಿತು ಸಾಗಬೇಕು ಎಂದರು. ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಸ್ವಾಗತಿಸಿದರು, ಶಿಕ್ಷಕ ಸತೀಶ ಹೆಗಡೆ ನಿರ್ವಹಿಸಿದರು. ಮಕ್ಕಳ ಅನುಪಸ್ಥಿತಿ ಇದ್ದರೂ ಮಕ್ಕಳಿಗೆ ಡಿಜಿಟಲ್ ಮಾಧ್ಯಮದ ಮೂಲಕ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಫೆÇೀಟೊ, ವಿವರ ಕಳುಹಿಸಲಾಯಿತು. ಕೊನೆಯಲ್ಲಿ ಶಿಕ್ಷಕ ಲೋಕನಾಥ ವಂದಿಸಿದರು.