ಕುಮಟಾ: ಪಟ್ಟಣದ ತಾಲೂಕಾಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಶಾಸಕ ದಿನಕರ ಕೆ. ಶೆಟ್ಟಿ, ಕೋವಿಡ್ ಲಸಿಕಾ ಕೇಂದ್ರ ಪರಿಶೀಲಿಸಿ, ಕೋವಿಡ್ ಮೂರನೆಯ ಅಲೆಯ ಮುನ್ನೆಚ್ಚರಿಕೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕೋವಿಡ್ ಲಸಿಕಾ ಕೇಂದ್ರ ಪರಿಶೀಲನೆ ನಡೆಸಿದ ಅವರು, ಲಸಿಕೆಯ ಕೊರತೆ ಹಾಗೂ ಲಸಿಕಾಕರಣದ ಬಗ್ಗೆ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಅಲ್ಲದೇ, ಕೋವಿಡ್ ಮೂರನೆಯ ಅಲೆಯ ಮುನ್ನೆಚ್ಚರಿಕೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯಕ, ಡಾ. ಶ್ರೀನಿವಾಸ ನಾಯಕ, ಚೇತನ ವಿ. ನಾಯಕ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.