ಕುಮಟಾ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಕತಗಾಲಿನ ಉಪ್ಪಿನಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯಿಂದ ಧ್ವಜಾರೋಹಣ ನೆರವೇರಿಸಲಾಯಿತು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಛದ್ಮವೇಷ, ರಸ ಪ್ರಶ್ನೆ ಹಾಗೂ ಚಿತ್ರ ಬಿಡಿಸುವ ಆನ್‍ಲೈನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅಲ್ಲದೇ, ಸ್ಥಳೀಯ ಮಂಜುನಾಥ ಗೌಡ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಚಿಕಿತ್ಸೆಗಾಗಿ ಶಾಲೆಯ ಶಿಕ್ಷಕರಾದ ಸುಮಂಗಲಾ ಪಟಗಾರ, ಸಂಧ್ಯಾರಾಯ್ಕರ, ಶ್ಯಾಮಲಾ ಹೆಗಡೆ, ರಾಮಚಂದ್ರ ಹೆಗಡೆ, ಎಸ್‍ಡಿಎಮ್‍ಸಿ ಅಧ್ಯಕ್ಷರು, ನಾರಾಯಣ ದೇಶಭಂಡಾರಿ, ಸದಸ್ಯರು, ಗ್ರಾಂ.ಪಂ ಸದಸ್ಯರು, ಉಪ್ಪಿನಪಟ್ಟಣ, ಶಿರಗುಂಜಿ, ಮಲವಳ್ಳಿ, ಕವಲೋಡಿ ಗ್ರಾಮದ ಪಾಲಕರೆಲ್ಲರೂ ಸೇರಿ 19 ಸಾವಿರ ರೂ.ಸಂಗ್ರಹಿಸಿ, ಚಿಕಿತ್ಸೆ ಪಡೆಯುತ್ತಿದ್ದ ಹೈ-ಟೆಕ್ ಆಸ್ಪತ್ರೆಯಲ್ಲಿ ಬಿಲ್ ಪಾವತಿಸಲಾಯಿತು.