ಶಿರಸಿ: ಬಡತನ, ಅನಕ್ಷರತೆ, ದಾರಿದ್ರ್ಯ ಇತ್ಯಾದಿಗಳು ದೇಶಕ್ಕೆ ಶಾಪ. ಜನಸಂಖ್ಯಾ ಸ್ಪೋಟ, ಭಯೋತ್ಪಾದನೆ, ಪ್ರಾಂತಿಯ ವಾದಗಳು ದೇಶಕ್ಕೆ ಬಹುದೊಡ್ಡ ಸವಾಲು ಎಂದು ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಟಿ.ಎಸ್.ಹಳೆಮನೆ ಹೇಳಿದರು.
ನಗರದ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡುತ್ತ, ರಾಷ್ಟ್ರ ಇಂದು ವಿಜ್ಞಾನ, ತಂತ್ರಜ್ಞಾನ sಸೇರಿದಂತೆ ಅನೇಕ ರಂಗಗಳಲ್ಲಿ ಅಪಾರ ಪ್ರಗತಿಯನ್ನು ಸಾದಿಸಿದ್ದು, ಅದರ ಪ್ರಯೋಜನವನ್ನು ಇಂದಿನ ಯುವಜನಾಂಗ ಇನ್ನೂ ಪಡೆಯಬೇಕಾಗಿದೆ. ಸರಕಾರಗಳು ಇಷ್ಟೆಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದರೂ ಕೋಟ್ಯಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.
ರಾಷ್ಟ್ರಧ್ವಜ ಕೇವಲ ಒಂದು ಬಟ್ಟೆಯ ತುಂಡಲ್ಲ. ಇದೊಂದು ರಾಷ್ಟ್ರ ಚಿಹ್ನೆ. ಸರ್ವಧರ್ಮಗಳ ಸಂಕೇತ ಎಂದರು. ಇದೇ ಸಂದರ್ಭದಲ್ಲಿ ದೇಶದ ಅಮೃತ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಇನ್ನಿತರ ಉಪನ್ಯಾಸ ವರ್ಗದವರು ಹಾಜರಿದ್ದರು.